ನಾಗ್ಪುರ, ಡಿ.11-ಸೇವೆಯಿಂದ ವಜಾಗೊಂಡ ಪೊಲೀಸ್ ಅಧಿಕಾರಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹಿಂದೆ ಹೂತಿಟ್ಟಿದ್ದ ಘಟನೆ ಇಲ್ಲಿ ನಡೆದಿದೆ.
ಆರೋಪಿಯನ್ನು ನರೇಶ್ ಅಲಿಯಾಸ್ ನರೇಂದ್ರ ಪಾಂಡುರಂಗ ದಹುಲೆ (40)ಎಂದು ಗುರುತಿಸಲಾಗಿದ್ದು ,ನೆರೆಯ ಚಂದ್ರಾಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಮತ್ತು ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯು ಹಿಂದೆ ಮುಂಬೈಪೊಲೀಸ್ ಪಡೆಯಲ್ಲಿ ಕೆಲಸ ಮಾಡಿದ್ದ , ಆದರೆ ಸೇವೆಯಿಂದ ವಜಾಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.ಚಂದ್ರಾಪುರ ಜಿಲ್ಲೆಯ ಚಿಮೂರ್ ನಿವಾಸಿ ವಿವಾಹಿತ ಮಹಿಳೆಯೊಂದಿಗೆ ಆರೋಪಿ ಸಂಭಂಧ ಹೊಂದಿದ್ದ.
ಶಾಲಾ ಅವಧಿಯಲ್ಲಿ ಸಹಪಾಠಿಗಳಾಗಿದ್ದ ದಾಹುಲೆ ಮತ್ತು ಮಹಿಳೆ ಆಗಸ್ಟ್‌ನಲ್ಲಿ ಫೇಸ್‌ಬುಕ್ ಮೂಲಕ ತಮ ಪರಿಚಯ ಮಾಡಿಕೊಂಡಿದ್ದರು .ಅದು ಶೀಘ್ರದಲ್ಲೇ ಪ್ರಣಯ ಸಂಬಂಧವನ್ನು ತಿರುಗಿತ್ತು ಮತ್ತು ಜೊತೆಯಾಗಿ ಇರಲು ನಿರ್ಧರಿಸಿದರು.
ಕಳೆದ ನ.26 ರಂದುಮುಂದಿನ ಭವಿಷ್ಯದ ಬಗ್ಗೆ ತೀವ್ರ ವಾದ-ಪ್ರತಿವಾದ ನಡೆದು ಅದು ಜಗಳಕ್ಕೆ ಕಾರಣವಾಗಿದೆ ಇದು ವಿಕೋಪಕ್ಕೆ ಹೋಗಿ ಕೋಪದಲ್ಲಿ ದಾಹುಲೆ ತನ್ನ ಪ್ರಿಯಸಿಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅಪರಾಧವನ್ನು ಮರೆಮಾಚಲು, ಶವದೊಂದಿಗೆ ಕದ್ದ ಕಾರಿನಲ್ಲಿ ಗಂಟೆಗಟ್ಟಲೆ ತಿರುಗಾಡಿದ್ದಾನೆ.ರಾತ್ರಿ ಬೆಲ್ತರೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೇಲಾ ಹರಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹಿಂದಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವವನ್ನುಎಸೆದು ಮಣ್ಣು ಸುರಿದಿದ್ದಾನೆ.
ಕೆಲವೇ ದಿನದಲ್ಲಿ ಕಾರು ಕಳ್ಳತನವಾಗಿರುವ ಬಗ್ಗೆ ತನಿಖೆ ನಡೆಸಿದ ಚಂದ್ರಾಪುರ ಪೊಲೀಸರು ದಾಹುಲೆನನ್ನು ಬಂಧಿಸಿದ್ದರು.ಫೋನ್ ದಾಖಲೆಗಳು,ಮತ್ತು ವಿಚಾರಣೆ ವೇಳೆ ದಾಹುಲೆ ಮಹಿಳೆಯ ಕೊಲೆ ಮಾಡಿರುವುದು ಗೊತ್ತಾಗಿದೆ.ನಂತರ ಶವವನ್ನು ಎಸೆದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದರು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.