ಥಾಣೆ, ಅ 22 – (ಪಿಟಿಐ) ಪೊಲೀಸರು ನವಿ ಮುಂಬೈ ಟೌನ್ಶಿಪ್ನ ವಾಶಿ ಪ್ರದೇಶದ ಮಾಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಗಸ್ ಕಾಲ್ ಸೆಂಟರ್ ಅನ್ನು ಭೇದಿಸಿದ್ದಾರೆ.ಮತ್ತು ಈ ಸಂಬಂಧ ಅದರ ಮಾಲೀಕರು ಮತ್ತು ವ್ಯವಸ್ಥಾಪಕರು ಸೇರಿದಂತೆ 23 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಅಮೆರಿಕದ ಕಂಪನಿಗಳ ಪ್ರತಿನಿಗಳಂತೆ ಪೊಸು ಕೊಟ್ಟು ಅಲ್ಲಿನ ಜನರಿಗೆ ವಯಾಗ್ರ ಮತ್ತು ಸಿಯಾಲಿಸ್ನಂತಹ ಔಷಧಗಳನ್ನು ಮಾರಾಟ ಮಾಡುತ್ತಿದ್ದರು. ಅವರು ಜನರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ವಿವರಗಳನ್ನು ಪಡೆದು ವಂಚಿಸಿದ್ದಾರೆ ಎಂದು ವಾಶಿ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಕಾಲ್ ಸೆಂಟರ್ನಲ್ಲಿ ನಡೆದ ದಾಳಿಯ ನಂತರ 3.97 ಲಕ್ಷ ರೂಪಾಯಿ ಮೌಲ್ಯದ ಹಲವಾರು ಗ್ಯಾಜೆಟ್ಗಳು, ಹಾರ್ಡ್ ಡಿಸ್ಕ್ ಮತ್ತು ಎಲೆಕ್ಟ್ರಿಕಲ್ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಮಾಸ್ ಉಗ್ರ ನೆಲೆಗಳ ಮೇಲೆ ಮುಂದುವರೆದ ಇಸ್ರೇಲ್ ವೈಮಾನಿಕ ದಾಳಿ
ಆರೋಪಿಗಳು ಸಾಫ್ಟ್ವೇರ್ ಬಳಸಿ ಹೊರಹೋಗುವ ಕರೆಗಳನ್ನು ಮಾಡಿದ್ದಾರೆ. ಅವರು ಗೇಟ್ವೇ ಬೈಪಾಸ್ ಮತ್ತು ವಿಒಐಪಿ ಮೂಲಕ ಕರೆಗಳನ್ನು ಮಾಡಿದ್ದಾರೆ, ಅಂತಹ ಕೃತ್ಯಗಳಲ್ಲಿ ತೊಡಗಿರುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿ ಹೇಳಿದರು. ಕಾಲ್ ಸೆಂಟರ್ ಮಾಲೀಕರು ನೆರೆಯ ಮುಂಬೈನ ಮಲಾಡ್ ಮೂಲದ ವ್ಯಕ್ತಿಯಿಂದ ಯುಎಸ್ನಲ್ಲಿರುವ ಜನರ ಡೇಟಾವನ್ನು ಖರೀದಿಸಿದ್ದಾರೆ ಮತ್ತು ಉದ್ಯೋಗಿಗಳು ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಆ ಜನರಿಗೆ ಕರೆ ಮಾಡಲು ಹುಸಿ ಹೆಸರುಗಳನ್ನು ಬಳಸಿದ್ದಾರೆ.
ಔಷಧ ಮಾರಾಟದ ಹಣವನ್ನು ಖಾರ್ಘರ್ ಪ್ರದೇಶದ ಬ್ಯಾಂಕ್ ಶಾಖೆಯಲ್ಲಿ ಭಾರತೀಯ ಕಂಪನಿಯ ಖಾತೆಗೆ ಜಮಾ ಮಾಡಲಾಗಿದೆ ಎಂದು ಅ„ಕಾರಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ), 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ಟೆಲಿಗ್ರಾಫ್ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ 23 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅ„ಕಾರಿ ತಿಳಿಸಿದ್ದಾರೆ.
ಶನಿವಾರ, ನವಿ ಮುಂಬೈ ಪೊಲೀಸರು ನೆರೂಲ್ ಪ್ರದೇಶದ ಮಾಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇದೇ ರೀತಿಯ ನಕಲಿ ಕಾಲ್ ಸೆಂಟರ್ ಅನ್ನು ಭೇದಿಸಿ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.