Wednesday, April 24, 2024
Homeರಾಜ್ಯಹಣಕಾಸು ವಿಚಾರಕ್ಕೆ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್ಸ್ ಕೈಕೈಮಿಲಾಯಿಸಿ ಫೈಟ್

ಹಣಕಾಸು ವಿಚಾರಕ್ಕೆ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್ಸ್ ಕೈಕೈಮಿಲಾಯಿಸಿ ಫೈಟ್

ಬೆಂಗಳೂರು,ಫೆ.29- ಹಣಕಾಸು ವಿಚಾರದಲ್ಲಿ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್‍ಗಳು ಜಗಳವಾಡಿ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ಹಿಂದೆ ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‍ಸ್ಟೆಬಲ್ ಗಂಗಪ್ಪ ಎಂಬುವರು ಮತ್ತೊಬ್ಬ ಕಾನ್‍ಸ್ಟೆಬಲ್ ಮುಲ್ತಾನಿ ಎಂಬುವರ ಬಳಿ 40 ಸಾವಿರ ರೂ. ಸಾಲ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಗಂಗಪ್ಪ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಮುಲ್ತಾನಿಯವರು ಫೋನ್ ಮಾಡಿದರೂ ಸಿಗುತ್ತಿರಲಿಲ್ಲ. ಹಣವೂ ಹಿಂದಿರುಗಿಸಿರಲಿಲ್ಲ. ಮೂರು ದಿನಗಳ ಹಿಂದೆ ಗಂಗಪ್ಪ ಅವರು ಕರ್ತವ್ಯದ ಮೇಲೆ ಕೆಜಿಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆ ವೇಳೆ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಮುಲ್ತಾನಿ ಅವರು ಇವರನ್ನು ಗಮನಿಸಿ ಹಣ ಕೇಳಿದ್ದಾರೆ.

ಫೋನ್ ಮಾಡಿದರೂ ನೀನು ಸಿಗುತ್ತಿಲ್ಲ. ಹಣವೂ ಹಿಂದಿರುಗಿಸಿಲ್ಲ ಎಂದು ಮುಲ್ತಾನಿ ಅವರು ಕೇಳಿದಾಗ ಇಬ್ಬರ ನಡುವೆ ಪೊಲೀಸ್ ಠಾಣೆ ಬಳಿಯೇ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದು, ಸಾರ್ವಜನಿಕರು ಪೊಲೀಸ್ ಕಾನ್‍ಸ್ಟೆಬಲ್‍ಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News