Tuesday, May 7, 2024
Homeಇದೀಗ ಬಂದ ಸುದ್ದಿಸಲಾನ್‌ಖಾನ್‌ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

ಸಲಾನ್‌ಖಾನ್‌ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

ಮುಂಬೈ, ಏ. 26- ಮುಂಬೈನಲ್ಲಿರುವ ನಟ ಸಲಾನ್‌ ಖಾನ್‌ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಸುಭಾಷ್‌ ಚಂದರ್‌ (37) ಮತ್ತು ಅನುಜ್‌ ಥಾಪನ್‌ (32) ಎಂದು ಗುರುತಿಸಲಾಗಿದೆ. ಇವರು ಗುಂಡು ಹಾರಿಸಿದ್ದವರಿಗೆ ಶಸಾ್ತ್ರಸ್ತ್ರ ಮತ್ತು ಕಾಟ್ರಿಡ್‌್ಜಗಳನ್ನು ಒದಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಕ್ರೈಂ ಬ್ರಾಂಚ್‌ ತಂಡ ಬಂಧಿಸಿದ್ದು, ಮುಂಬೈಗೆ ಕರೆ ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಲಾನ್‌ಖಾನ್‌ ನಿವಾಸದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಬಿಹಾರದ ನಿವಾಸಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್‌ ಪಾಲ್‌ (21) ಅವರ ಪೊಲೀಸ್‌‍ ಕಸ್ಟಡಿ ಅವಧಿಯನ್ನು ಏ.29ರವರೆಗೆ ವಿಸ್ತರಿಸಲಾಗಿದೆ.ಅವರನ್ನು ಏಪ್ರಿಲ್‌ 16 ರಂದು ಗುಜರಾತ್‌ನ ಕಚ್‌ ಜಿಲ್ಲೆಯ ಮಾತಾ ನೊ ಮಧ್‌ ಗ್ರಾಮದಿಂದ ಬಂಧಿಸಲಾಯಿತು.

ಗುಂಡಿನ ದಾಳಿಗೆ ಬಳಸಿದ ಆಯುಧಗಳನ್ನು ಪತ್ತೆ ಹಚ್ಚಲು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ತಂಡವು ಗುಜರಾತ್‌ನ ತಾಪಿ ನದಿಯಿಂದ ಎರಡು ಪಿಸ್ತೂಲ್‌ಗಳು, ವ್ಯಾಗಜೀನ್‌ಗಳು ಮತ್ತು ಬುಲೆಟ್‌ಗಳನ್ನು ವಶಪಡಿಸಿಕೊಂಡಿದೆ.

RELATED ARTICLES

Latest News