Tuesday, January 21, 2025
Homeರಾಜ್ಯಇಲಾಖೆ ಗೌರವ ಹಾಳು ಮಾಡಿದ ಪೊಲೀಸರು : ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ

ಇಲಾಖೆ ಗೌರವ ಹಾಳು ಮಾಡಿದ ಪೊಲೀಸರು : ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ

Police have ruined the reputation of the department: Union Minister Kumaraswamy

ಹಾಸನ, ಡಿ.23- ಕರ್ನಾಟಕ ಪೊಲೀಸ್ ಬಗ್ಗೆ ದೇಶದಲ್ಲೇ ಉತ್ತಮ ಕೆಲಸ ಮಾಡುವ ಇಲಾಖೆ ಎಂಬ ಗೌರವ ಇತ್ತು. ಆ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಪೊಲೀಸ್ ಇಲಾಖೆ ದೇಶದಲ್ಲೇ ವಿಶೇಷವಾದ ಗೌರವಯುತ ಸ್ಥಾನ ಇದೆ. ಅದನ್ನು ಹಾಳು ಮಾಡಲಾಗುತ್ತಿದೆ ಎಂದರು.

ನಾನು ಸಂಪೂರ್ಣವಾಗಿ ಪೊಲೀಸ್ ಇಲಾಖೆಯನ್ನು ದೂಷಿಸಿವುದಿಲ್ಲ. ಆದರೆ, ಸರ್ಕಾರದಲ್ಲಿರುವ ಮಂತ್ರಿಗಳು ಕೆಲವು ಆಯ್ದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ಕೊಡುವ ಮೂಲಕ ಕಾನೂನು ಬಾಹಿರವಾದಂತಹ ತೀರ್ಮಾನಗಳಾಗುತ್ತಿವೆ ಎಂದು ಅವರು ಟೀಕಿಸಿದರು.

ತಮಗೆ ಬೇಕಾದಂತೆ ಕೇಸ್ಗಳನ್ನು ಬುಕ್ ಮಾಡಿಸುತ್ತಿದ್ದಾರೆ. ತಮ ವಿರೋಧಿಗಳನ್ನು ಸದೆಬಡೆಯಬೇಕು ಎಂಬ ರೀತಿಯ ತೀರ್ಮಾನ ಹಾಗೂ ಅಧಿಕಾರ ದುರುಪಯೋಗ, ಕಾನೂನಿನ ಉಲ್ಲಂಘನೆ ಸರ್ಕಾರದಿಂದಲೇ ಆಗುತ್ತಿದೆ ಎಂದು ಅವರು ಆರೋಪಿಸಿದರು.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂದಿದ್ದೇನೆ.

ಕಾಲವೇ ಇದಕ್ಕೆಲ್ಲ ಉತ್ತರ ಕೊಡುತ್ತದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸಿದ್ದೇನೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಅನ್ನುವುದಕ್ಕೆ ವೇದಿಕೆ ಸಿದ್ದ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

RELATED ARTICLES

Latest News