Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ | Belagaviಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಾಳಿ

ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಾಳಿ

ಬೆಳಗಾವಿ,ಆ.10– ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ಮಾಡಿ ತಪಾಸಣೆ ನಡೆಸಿದರು.

ದಾಳಿ ವೇಳೆ 3 ಚಾಕು, ತಂಬಾಕು ಸ್ಯಾಚೆಟ್‌, ಸಿಗರೇಟ್‌ ಪ್ಯಾಕ್‌, ಹೀಟರ್‌, ವೈಯರ್‌ ಬಂಡಲ್‌, ಸ್ಟೌ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

ನಗರ ಪೊಲೀಸ್‌‍ ಆಯುಕ್ತರಾದ ಯಡಾ ಮಾರ್ಟಿನ್‌ ಮಾರ್ಬ ನ್ಯಾಂಗ್‌ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಪೊಲೀಸ್‌‍ ಅಧಿಕಾರಿಗಳು ಹಾಗೂ 220 ಸಿಬ್ಬಂದಿ ದಾಳಿ ನಡೆಸಿ ತೀವ್ರ ತಪಾಸಣೆ ನಡೆಸಿದರು.

ಬೆಳಗಾವಿ ಗ್ರಾಮೀಣ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಿಯಮಿತ ತಪಾಸಣೆ ಮುಂದುವರೆಯುತ್ತದೆ ಎಂದು ಪೊಲೀಸ್‌‍ ಆಯುಕ್ತರಾದ ಯಡಾ ಮಾರ್ಟಿನ್‌ ಸುದ್ದಿಗಾರರಿಗೆ ತಿಳಿಸಿದರು.

RELATED ARTICLES

Latest News