Saturday, September 14, 2024
Homeರಾಜ್ಯಜ.28ರಂದು ಸಿಎಆರ್-ಡಿಎಎಆರ್ ಹುದ್ದೆಗೆ ಲಿಖಿತ ಪರೀಕ್ಷೆ

ಜ.28ರಂದು ಸಿಎಆರ್-ಡಿಎಎಆರ್ ಹುದ್ದೆಗೆ ಲಿಖಿತ ಪರೀಕ್ಷೆ

ಬೆಂಗಳೂರು,ಜ.10- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್‍ಸ್ಟೆಬಲ್ (ಸಿಎಆರ್-ಡಿಎಆರ್) (ಪುರುಷ ಮತ್ತು ತೃತೀಯ ಲಿಂಗ ಪುರುಷ) 3064 ಹುದ್ದೆಗಳಿಗೆ ಜ.28ರಂದು ಲಿಖಿತ ಪರೀಕ್ಷೆ ರಾಜ್ಯಾದ್ಯಂತ ನಡೆಯಲಿದೆ.

ಅಂದು ಬೆಳಗ್ಗೆ 11ರಿಂದ 12.30ರವರೆಗೆ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಗೆ ಎಸ್‍ಎಂಎಸ್ ಮೂಲಕ ಮುಂಬರುವ ದಿನಗಳಲ್ಲಿ ಕರೆಪತ್ರದ ಮಾಹಿತಿ ನೀಡಲಾಗುವುದು.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?

ಕರಪತ್ರದಲ್ಲಿ ಲಿಂಕ್ ಸಹ ಕಳುಹಿಸಲಾಗುವುದು. ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ನೇಮಕಾತಿ ಸಮಿತಿಯ ಸಮನ್ವಯ ಅಧಿಕಾರಿ ಯಡಾ ಮಾರ್ಟನ್ ಮಾರ್ಬನ್ಯಾಂಗ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News