Saturday, July 20, 2024
Homeರಾಜ್ಯಸಂಸದರ ನಿವಾಸಕ್ಕೆ ಪ್ರಜ್ವಲ್‌ ರೇವಣ್ಣನನ್ನು ಕರೆದೊಯ್ದು ಮಹಜರು

ಸಂಸದರ ನಿವಾಸಕ್ಕೆ ಪ್ರಜ್ವಲ್‌ ರೇವಣ್ಣನನ್ನು ಕರೆದೊಯ್ದು ಮಹಜರು

ಹಾಸನ,ಜೂ.21- ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣನನ್ನು ಬೆಂಗಳೂರಿನಿಂದ ನಗರದ ಸಂಸದರ ನಿವಾಸಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.

ಇಲ್ಲಿನ ಆರ್‌.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರಜ್ವಲ್‌ನನ್ನು ಕರೆದೊಯ್ದು ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಎಫ್‌ಎಸ್‌‍ಎಲ್‌ನ ನಾಲ್ಕುಸಿಬ್ಬಂದಿಗಳ ತಂಡ ಹಾಗೂ ಎಸ್‌‍ಐಟಿ ತಂಡದ ಅಧಿಕಾರಿಗಳು ಜೊತೆಯಲ್ಲಿದ್ದರು.

ಪ್ರಜ್ವಲ್‌ ಸಂಸದರಾಗಿದ್ದ ಅವಧಿಯಲ್ಲಿ ಸರ್ಕಾರಿ ನಿವಾಸದಲ್ಲಿ ಅತ್ಯಾಚಾರ-ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬ ಆರೋಪದ ಹಿನ್ನಲೆಯಲ್ಲಿ ಇಂದು ಮತ್ತೆ ನಗರದಿಂದ ಪ್ರಜ್ವಲ್‌ನನ್ನು ಹಾಸನಕ್ಕೆ ಕರೆದೊಯ್ದ ಸ್ಥಳ ಮಹಜರು ಮಾಡಿ ನಂತರ ನಗರಕ್ಕೆ ಕರೆತಂದಿದ್ದಾರೆ.

ಈಗಾಗಲೇ 2 ಪ್ರಕರಣದಲ್ಲಿ ಎಸ್‌‍ಐಟಿ ಪೊಲೀಸರು ಪ್ರಜ್ವಲ್‌ನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

RELATED ARTICLES

Latest News