ಬೆಂಗಳೂರು,ಜು.31- ಬೆಂಗಳೂರು ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಟೋಯಿಂಗ್ ಆರಂಭಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಟೋಯಿಂಗ್ ಮಾಡುವುದನ್ನು ಗುತ್ತಿಗೆ ನೀಡಲಾಗಿತ್ತು. ಈ ಬಾರಿ ಪೊಲೀಸರೇ ಟೋಯಿಂಗ್ ಮಾಡುತ್ತಾರೆ. ಯಾವುದೇ ಕಂಪನಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್‌ಗೆ ಸಮಸ್ಯೆಯಾಗುತ್ತಿದೆ.ಎಲ್ಲಿ ಪಾರ್ಕಿಂಗ್ ಆಗಬಾರದು ಎಂಬ ನಿಯಮ ಇರುತ್ತದೆಯೋ, ಜನರು ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು. ಜನ ಓಡಾಡಲು ರಸ್ತೆ ಮಾಡಿದ್ದಾರೆ. ಪಾರ್ಕಿಂಗ್ ಮಾಡಲು ಅಲ್ಲ. ಈ ಹಿಂದೆ ಬೆಂಗಳೂರು ನಗರ ಉಸ್ತುವಾರಿ ಸಚಿವನಾದ್ದಾಗ ಈ ಪ್ರಶ್ನೆ ಬಂದಿತ್ತು. ಜನರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಸೂಚಿಸುತ್ತೇನೆ. ಜಟಾಪಟಿಯಾದರೆ ಕಾನೂನು ಇಲ್ಲವೇ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್‌ಒಪಿ ಮಾಡಿಕೊಂಡಿದ್ದಾರೆ. ಅದನ್ನು ಜಾರಿ ಮಾಡುತ್ತಾರೆ. ಇಲಾಖೆಗೆ ಅನೇಕ ಅನುಭವಗಳಾಗಿವೆ. ಆದ್ದರಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆ ಮಾಡುವುದಿಲ್ಲ.
ಹತ್ತಿರದ ಜಿಲ್ಲೆಗಳಿಂದ ಮುಖಂಡರು, ಕಾರ್ಯಕರ್ತರು ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸುತ್ತಾರೆ. ಎಲ್ಲ ರೀತಿಯ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ವತಿಯಿಂದ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಕೊಟ್ಟಿರುತ್ತಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳಿವೆ ಎಂದು ಈ ಹಿಂದೆ ವರದಿಯಾಗಿತ್ತು. ತನಿಖಾ ಏಜೆನ್ಸಿ ಪತ್ತೆಹಚ್ಚಿದ್ದಾರೆ. ಅಲ್‌ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆ ಕರ್ನಾಟಕದವರಲ್ಲ. ಈ ಬಗ್ಗೆ ತನಿಖಾ ಸಂಸ್ಥೆಯವರು ಮಾಹಿತಿ ಹಂಚಿಕೊಂಡಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಎಂಡಿಎಂಎ ತಯಾರಿಸುತ್ತಿದ್ದ ಆರೋಪಿಗಳು ಇಪ್ಪತ್ತು ದಿನದ ಹಿಂದೆ ಬಂದಿದ್ದರು. ಮುಂಬೈನಲ್ಲಿ ಆರೋಪಿಯನ್ನು ಹಿಡಿದಾಗ ಸುಳಿವು ಆಧರಿಸಿ ಬಂದಿದ್ದಾರೆ. ನಮ ರಾಜ್ಯದಲ್ಲಿಯೂ ಸಹ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ನಮ ಪೊಲೀಸರು ಬೇರೆ ರಾಜ್ಯಗಳಿಗೆ ಹೋಗಿ ಆರೋಪಿಗಳನ್ನು ಹಿಡಿದುಕೊಂಡು ಬರುತ್ತಾರೆ. ಇದು ದೇಶದಾದ್ಯಂತ ನಡೆಯುವ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದರು.
- ಲಭ್ಯವಾಗಿರುವ ಅಸ್ಥಿಪಂಜರಗಳ ರಹಸ್ಯ ಬೇಧಿಸಲು ಮುಂದಾದ ಎಸ್ಐಟಿ
- ಹೂವಿನಲ್ಲಿ ಅರಳಲಿದ್ದಾರೆ ಕಿತ್ತೂರು ರಾಣಿ ಚೆನ್ನಮ ಮತ್ತು ಸಂಗೊಳ್ಳಿ ರಾಯಣ್ಣ
- ರಾಹುಲ್ ಗಾಂಧಿ ಆರೋಪಗಳು ಆಧಾರ ರಹಿತ : ಚುನಾವಣಾ ಆಯೋಗ
- ಸ್ಮೋಕಿಂಗ್ ಜೋನ್ ಇಲ್ಲದ ಬಾರ್ಗಳಿಗೆ ನೋಟೀಸ್
- ಮುಂದುವರೆದ ಸಿಎಂ-ಡಿಸಿಎಂ ಮುಸುಕಿನ ಗುದ್ದಾಟ, ಸಂಧಾನಕ್ಕೆ ‘ಕೈ’ಕಮಾಂಡ್ ಸರ್ಕಸ್