Homeರಾಜ್ಯರಾಜಕೀಯ ಜಾಹೀರಾತುಗಳಲ್ಲಿ ಗಾಂಧೀಜಿ ಬಳಕೆಗೆ ವಿರೋಧ

ರಾಜಕೀಯ ಜಾಹೀರಾತುಗಳಲ್ಲಿ ಗಾಂಧೀಜಿ ಬಳಕೆಗೆ ವಿರೋಧ

Objection to the use of Gandhiji in political advertisements

ಬೆಂಗಳೂರು,ಫೆ.8- ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡಿರುವ ರೀತಿಯು ಅವರ ಅಹಿಂಸಾ ತತ್ವ, ಸತ್ಯಾಗ್ರಹ ಹಾಗೂ ಸರ್ವೋದಯದಂತಹ ಮೂಲ ಆದರ್ಶಗಳಿಗೆ ಸಂಪೂರ್ಣ ವಿರೋಧವಾಗಿದೆ ಎಂದು ಕರ್ನಾಟಕ ಗಾಂಧಿ ಸಾರಕ ನಿಧಿ ಹೇಳಿದೆ.

ಈ ಸಂಬಂಧ ಗಾಂಧಿ ಸಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಹಾಗೂ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಗಾಂಧೀಜಿಯವರ ತತ್ವಗಳನ್ನು ಅರಿತಿರುವ ಯಾರಿಗಾದರೂ ಜಾಹೀರಾತಿನಲ್ಲಿ ಗಾಂಧೀಜಿಯವರನ್ನು ಬಳಸಿಕೊಂಡಿರುವ ರೀತಿ ಆಘಾತವನ್ನುಂಟು ಮಾಡುವಂಥದ್ದಾಗಿದೆ. ಇಡೀ ದೇಶವೇ ತಲೆ ತಗ್ಗಿಸುವಂತಹ ಜಾಹೀರಾತಿನ ಚಿತ್ರಣದಲ್ಲಿ ಗಾಂಧೀಜಿಯವರ ಮೌಲ್ಯಗಳ ಹತ್ಯೆಯಾಗಿದೆ ಎಂಬುದು ನಮ ಗಂಭೀರ ಅಭಿಪ್ರಾಯವಾಗಿದೆ ಎಂದು ಆರೋಪಿಸಿದ್ದಾರೆ.

ಜಗತ್ತಿನಾದ್ಯಂತ ಮಹಾತ ಎಂದರೆ ಮಹಾತ ಗಾಂಧೀಜಿಯವರು ಎಂಬ ಗೌರವ ಭಾವನೆ ಇರುವ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಗಾಂಧೀಜಿಯವರನ್ನು ಅವಹೇಳನಕಾರಿ ಹಾಗೂ ಪಕ್ಷ ರಾಜಕಾರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಯುವಜನತೆಗೆ ತಪ್ಪು ಸಂದೇಶ ಹೋಗುವ ಅಪಾಯವೂ ಉಂಟಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಗಾಂಧಿ ಸಾರಕ ನಿಧಿಯು ಗಾಂಧೀಜಿಯವರ ಈ ರೀತಿಯ ದುರ್ಬಳಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಗಾಂಧೀಜಿಯವರ ಆದರ್ಶಗಳನ್ನು ಯುವಜನತೆಗೆ ತಲುಪಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಅವರ ವ್ಯಕ್ತಿತ್ವ ಹಾಗೂ ತತ್ವಗಳಿಗೆ ಅಪಚಾರವಾಗುವ ರೀತಿಯಲ್ಲಿ ಅವರನ್ನು ಬಳಸಿಕೊಳ್ಳಬಾರದು ಎಂಬುದು ನಮ ಸ್ಪಷ್ಟ ಹಾಗೂ ದೃಢವಾದ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಮಾಧ್ಯಮಗಳು ಇಂತಹ ವಿಷಯಗಳಲ್ಲಿ ತಮ ರಾಷ್ಟ್ರೀಯ ಹೊಣೆಗಾರಿಕೆಯನ್ನು ಅರಿತು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದು ನಮ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News