Thursday, January 15, 2026
Homeರಾಜಕೀಯಡಿಕೆಶಿ ಹಣೆಯಲ್ಲಿ ಸಿಎಂ ಆಗುವುದನ್ನು ಬರೆದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಸೋಮಶೇಖರ್‌

ಡಿಕೆಶಿ ಹಣೆಯಲ್ಲಿ ಸಿಎಂ ಆಗುವುದನ್ನು ಬರೆದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಸೋಮಶೇಖರ್‌

ST Somashekhar On DK Shivakumar

ಯಶವಂತಪುರ,ನ.29- ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಯಾಗುವ ಹಣೆಬರಹವಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಶಾಸಕ ಎಸ್‌‍.ಟಿ ಸೋಮಶೇಖರ್‌ ತಿಳಿಸಿದರು.

ಕ್ಷೇತ್ರದ ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಯ 2ನೇ ಹಂತದ ಸಮಗ್ರ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿ ಪಂಚಾಯತಿಯ ಮೊದಲನೇ ಮಹಡಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸದಾನಂದಗೌಡರು ಕೆಎಂಎ್‌‍ ಅಧ್ಯಕ್ಷರಾಗುವುದಕ್ಕೆ ಆಗಿರಲಿಲ್ಲ. ಮುಖ್ಯಮಂತ್ರಿಯಾದರು. ಕಾಂಗ್ರೆಸ್‌‍-ಜೆಡಿಎಸ್‌‍ ಸಮಿಶ್ರ ಸರ್ಕಾರದಲ್ಲಿ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ರಾ? ಕಡಿಮೆ ಸಂಖ್ಯಾ ಬಲವನ್ನು ಹೊಂದಿದ್ದ ಜೆಡಿಎಸ್‌‍ನ ಕುಮಾರಸ್ವಾಮಿ ಹಣೆ ಬರಹದಿಂದ ಮುಖ್ಯಮಂತ್ರಿ ಆಗಿರಲಿಲ್ವೇ ? ಅದರಂತೆ ಡಿಕೆಶಿಗೆ ಸಿಎಂ ಆಗುವ ಹಣೆಬರಹವಿದ್ರೆ ಮುಗೀತು ಸಿಎಂ ಆಗುತ್ತಾರೆ ಎಂದರು.

ಅಭಿವೃದ್ಧಿಗೆ 113 ಕೋಟಿ ಅನುದಾನ ಕೊಟ್ಟಿದ್ದಾರೆ. ಈ ಸಂಬಂಧ ಧನ್ಯವಾದ ತಿಳಿಸಲು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿಯಾಗ್ದೆಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತ್ರ ಪದೇ ಪದೇ ಭೇಟಿ ಮಾಡುತ್ತೇನೆ. ರಾಜಕೀಯ ವಿಚಾರಗಳನ್ನು ಡಿಕೆಶಿ ಕೇಳುವುದಿಲ್ಲ ನಾನು ಹೇಳುವುದಿಲ್ಲ.

ನನ್ನ ಕೆಲಸಗಳಿಗಷ್ಟೇ ನಾನು ಸೀಮಿತನಾಗಿದ್ದೇನೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಸೂಲಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ಚಿಕ್ಕಣ್ಣ, ಮುಖಂಡರಾದ ತಿಮೇಗೌಡ,ರಾಮಚಂದ್ರ, ಚನ್ನಪ್ಪ, ಅಶೋಕ್‌ ರಾಮಸಂದ್ರ, ನಾಗರಾಜ್‌‍, ಬಿಡಿಎ ಅಧಿಕಾರಿ ಅಶೋಕ್‌ ಮೊದಲಾದವರಿದ್ದರು.

RELATED ARTICLES

Latest News