Saturday, October 5, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಕಾಲೇಜು ವಿದ್ಯಾರ್ಥಿಗಳ ಊಟದ ವಿಚಾರದಲ್ಲಿ ರಾಜಕೀಯ

ಕಾಲೇಜು ವಿದ್ಯಾರ್ಥಿಗಳ ಊಟದ ವಿಚಾರದಲ್ಲಿ ರಾಜಕೀಯ

politics on college students meals

ಚಿಕ್ಕಬಳ್ಳಾಪುರ, ಅ 5– ದಾನಿಗಳಿಂದ ಮಧ್ಯಾಹ್ನದ ಊಟ ಕೊಡಿ ಎಂದು ಹೇಳಿದವರೇ ರಾಜಕಾರಣದ ರಾಜಕೀಯಕ್ಕೆ ಮಾರುಹೋಗಿ ರಾಜಕಾರಣಿಯೊಬ್ಬರ ಅನುಮತಿ ಸಿಗುವವರೆವಿಗೂ ಊಟ ಕೊಡಬೇಡಿ ಎಂದು ನಿರಾಕರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಹೌದು ಇದು ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂಗತಿ…

ಕಳೆದ 15ದಿನಗಳ ಹಿಂದೆ ನಗರದ ಪ್ರತಿಷ್ಠಿತ ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಸಂದೀಪ ಬಿ ರೆಡ್ಡಿ ಅವರಿಂದ ಮಧ್ಯಾಹ್ನದ ಊಟದ ಬೇಡಿಕೆ ಇಟ್ಟಿದ್ದ ಕಾಲೇಜಿನವರು ಊಟ ಕೊಡಲು ಎಲ್ಲ ರೀತಿಯ ಸಿದ್ಧಪಡಿಸಿಕೊಂಡರೆ ಇದಕ್ಕೆ ರಾಜಕೀಯ ಲೇಪನ ಹಚ್ಚಿ ಶಾಸಕರು ಊಟ ಕೊಡಲು ಅನುಮತಿ ಕೊಡುವವರೆಗೂ ನೀವು ಊಟ ಕೊಡಬೇಡಿ ಎಂದು ಪ್ರಾಂಶುಪಾಲರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಬೇಸತ್ತ ಸಮಾಜ ಸೇವಕರು ಹಾಗೂ ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ನೀವು ಅನುಮತಿ ಕೊಡುವುದು ಏನು? ಹಸಿದ ಹೊಟ್ಟೆಗೆ ಅನ್ನ ಕೊಟ್ಟೆ ಕೊಡುವೆ ಎನ್ನುವ ಛಲದೊಂದಿಗೆ ಕೊಟ್ಟ ಮಾತನ್ನ ಉಳಿಸಿಕೊಂಡು ವಿದ್ಯಾರ್ಥಿನಿಯರ ಹಸಿದ ಹೊಟ್ಟೆಗೆ ಅನ್ನ ಕೊಡಲು ಮುಂದಾಗಿದ್ದಾರೆ.

ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟವನ್ನು ನೀಡುವ ವಿಚಾರ ಇದೀಗ ರಾಜಕೀಯ ದಾಳವಾಗಿ ಪರಿಣಮಿಸಿದ್ದು, ಆರಂಭದಲ್ಲಿ ಊಟದ ವ್ಯವಸ್ಥೆ ಮಾಡಿಕೊಡಿ ಎಂದವರೆ ಇದೀಗ ಅನುಮತಿ ಬೇಕು ಎಂದು ನಿರಾಕರಿಸಿರುವುದು ಸೋಜಿಗ.

ಕಳೆದ ಕೆಲ ದಿನಗಳ ಹಿಂದೆ ನಡೆದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭಗತ್‌ ಸಿಂಗ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸಂದೀಪ್‌ರೆಡ್ಡಿ ಅವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುವಂತೆ ಕಾಲೇಜಿನ ಪ್ರಾಂಶುಪಾಲರು ಒತ್ತಾಯಿಸಿದ್ದು, ಇದಕ್ಕೆ ಬದ್ಧನಾದ ಸಂದೀಪ್‌ರೆಡ್ಡಿ ಮಧ್ಯಾಹ್ನದ ಊಟ ನೀಡುವುದಾಗಿ ಘೋಷಣೆ ಮಾಡಿದ್ದರು.

ಇದರ ನಡುವೆ ಕಾಲೇಜಿನಲ್ಲಿ ಟ್ರಸ್ಟ್‌ ವತಿಯಿಂದ ಅಡುಗೆ ತಯಾರಿಗೆ ಅಡುಗೆ ಕೋಣೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಿಕೊಂಡ ಬಳಿಕ ಅನುಮತಿ ಪಡೆಯುವವರಿಗೆ ಊಟ ವ್ಯವಸ್ಥೆ ಮಾಡಲು ಆಗುವುದಿಲ್ಲ ಎಂದು ತಿಳಿಸಿ ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಸಂದೀಪ್‌ರೆಡ್ಡಿ ಅವರು ಮೊನ್ನೆ ಕಾಲೇಜಿನ ಗೇಟ್‌ ಬಳಿಯೇ ವಿದ್ಯಾರ್ಥಿಗಳಿಗೆ ಊಟ ನೀಡಿ ಆಕ್ರೋಶ ಹೊರಹಾಕಿದರು.

ಊಟದಲ್ಲಿ ರಾಜಕೀಯ ಇದೆಂಥ ನೀಚ ಕೃತ್ಯ!
ಚಿಕ್ಕಬಳ್ಳಾಪುರ ನಗರವು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ವಿದ್ಯಾಭ್ಯಾಸ ಪಡೆಯಲು ಆಗಮಿಸುವ ವಿದ್ಯಾರ್ಥಿನಿಯರು ಮಧ್ಯಾಹ್ನದ ಊಟವಿಲ್ಲದೆ ಪಾಠವನ್ನು ಕೇಳುವ ಸ್ಥಿತಿಯಿದೆ ಎಂಬ ಕಾಲೇಜಿನ ಪ್ರಾಂಶುಪಾಲರ ಒತ್ತಾಯದ ಮೇರೆಗೆ ತಕ್ಷಣ ಊಟದ ವ್ಯವಸ್ಥೆ ಮಾಡಿಕೊಡಲು ಒಪ್ಪಿದೆ. ಆದರೆ ಬಡಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಕೆಲವರು ರಾಜಕೀಯ ಮಾಡಿದ್ದಾರೆ. ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡ ಬಳಿಕ ಇದರಿಂದ ಪ್ರಾಂಶುಪಾಲರು ಅನುಮತಿ ಬೇಕು ಎಂದು ಕಾಲ ದೂಡುತ್ತಿದ್ದಾರೆ ಎಂದು ಸಂದೀಪ ಬಿ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ:
ಕಾಲೇಜಿನಲ್ಲಿ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಯರ ಪೈಕಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ. ಅನ್ನದಾನ ಮಾಡುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ ಈ ವಿಚಾರದಲ್ಲಿ ಯಾವುದೇ ರಾಜಕೀಯದ ಒತ್ತಡವಿಲ್ಲ. ಅನ್ನದಾನದ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ನಾವೇ ಹೊಣೆ ಆಗುತ್ತೇವೆ. ಈ ನಿಟ್ಟಿನಲ್ಲಿ ಅನುಮತಿ ಪಡೆಯುವವರೆಗೆ ಮಧ್ಯಾಹ್ನದ ಊಟ ನೀಡಲು ನಿರಾಕರಿಸಲಾಗಿತ್ತು ಎಂದು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Latest News