ಬೆಂಗಳೂರು,ನ.21-ಆಕ್ಷೇಪಾರ್ಹ ಪೋಸ್ಟರ್ ಮೂಲಕ ನಮ್ಮ ನಾಯಕರ ತೇಜೋವಧೆ ಮಾಡಲಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕೆಂದು ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಆಕ್ಷೇಪಾರ್ಹ ಪೋಸ್ಟ್ ಅಂಟಿಸಲಾಗುತ್ತಿದೆ. ಇದು ಜನರನ್ನು ದಿಕ್ಕು ತಪ್ಪಿಸುವ ಕೆಲಸ. ಉಪಮುಖ್ಯಮಂತ್ರಿಯವರು ಪೋಸ್ಟರ್ ಅಂಟಿಸಬೇಡಿ, ಬ್ಯಾನರ್ ಹಾಕಬೇಡಿ ಎಂದು ಹೇಳಿದ್ದರು. ಆದರೆ ಪೋಸ್ಟರ್ ಅಂಟಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪಂಚತಾರಾ ಹೊಟೇಲ್‌ಗಳ ನಿರ್ಮಾಣಕ್ಕೆ ಮುಂದಾದ ಸರ್ಕಾರ
ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲಿ ರಾತ್ರೋರಾತ್ರಿ ಪೇಸಿಎಂ ಪೋಸ್ಟರ್‍ಗಳನ್ನು ಅಂಟಿಸಿದ್ದರು. ಸರ್ಕಾರವನ್ನು ಈಗ ಟೀಕೆ ಮಾಡುವವರ ಬಗ್ಗೆ ವ್ಯಂಗ್ಯವಾದ ಪೋಸ್ಟರ್ ಅಂಟಿಸಿದರೆ ಮೇಲುಗೈ ಸಾಧಿಸಬಹುದೆಂಬ ಭ್ರಮೆಯಲ್ಲಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಪೋಸ್ಟರ್‍ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ.
ರಾಜಕಾರಣದಲ್ಲಿ ಅಕಾರ ಶಾಶ್ವತವಲ್ಲ. ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕರು ಇಂಥವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದಾಗ ಏನು ಮಾಡುತ್ತಿದ್ದರು? ಮತ್ತದೇ ಪ್ರವೃತ್ತಿ ನಿನ್ನೆಯೂ ಮುಂದುವರೆದಿದೆ. ಇಂಥದ್ದನ್ನು ಕೂಡಲೇ ನಿಲ್ಲಿಸಬೇಕು. ಇದು ನಿಲ್ಲಿಸದಿದ್ದರೆ ನಾವು ಅದೇ ರೀತಿ ಮುಂದುವರೆಯಬೇಕಾಗುತ್ತದೆ.
ಹೆಚ್‌ಡಿಕೆ ಆರೋಪ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ: ಡಿಸಿಎಂ
ಕುಮಾರಸ್ವಾಮಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆ ಸಹಿತ ಆರೋಪ ಮಾಡಿದ್ದಾರೆ. ಆರೋಪ ಮಾಡಿದ ಕೂಡಲೇ ಸರ್ಕಾರ ನಡೆಸುವವರಿಗೆ ಭಯವೇಕೆ? ತಪ್ಪು ಮಾಡದಿದ್ದರೆ ಅವರೇಕೆ ಭಯಪಡಬೇಕು ಎಂದ ಅವರು ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ನಾವು ಕೂಡ ಅದೇ ರೀತಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅಶ್ವಿನ್‍ಕುಮಾರ್, ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ರಮೇಶ್‍ಗೌಡ ಉಪಸ್ಥಿತರಿದ್ದರು.