Thursday, June 20, 2024
Homeರಾಜ್ಯಸ್ಥಳ ಮಹಜರ್‌ಗಾಗಿ ಪ್ರಜ್ವಲ್‌ ರೇವಣ್ಣನನ್ನು ಹೊಳೆನರಸೀಪುರ ಕರೆತಂದ ಎಸ್‌‍ಐಟಿ ತಂಡ

ಸ್ಥಳ ಮಹಜರ್‌ಗಾಗಿ ಪ್ರಜ್ವಲ್‌ ರೇವಣ್ಣನನ್ನು ಹೊಳೆನರಸೀಪುರ ಕರೆತಂದ ಎಸ್‌‍ಐಟಿ ತಂಡ

ಹಾಸನ,ಜೂ.8- ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಸ್ಥಳ ಮಹಜರ್‌ಗಾಗಿ ವಿಶೇಷ ತನಿಖಾ ತಂಡ ಹೊಳೆನರಸೀಪುರದ ಚೆನ್ನಾಂಬಿಕಾ ನಿವೇಶನಕ್ಕೆ ಕರೆತಂದಿದ್ದು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.

ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್‌ರೇವಣ್ಣ ಕರೆತಂದ ಎಸ್‌‍ಐಟಿ, ಕ್ಯಾಮೆರಾಗಳಿಗೂ ಕಾಣದಂತೆ ಪ್ರಜ್ವಲ್‌ ರೇವಣ್ಣ ಅವರನ್ನು ವಾಹನದಲ್ಲಿ ನಿವಾಸಕ್ಕೆ ಕರೆದೊಯ್ಯಿತು.ಪ್ರಜ್ವಲ್‌ ಮೇಲಿನ ಪ್ರಕರಣಗಳ ಘಟನಾ ಸ್ಥಳಗಳ ಮಹಜರ್‌ಗಾಗಿ ಎಸ್‌‍ಐಟಿ ಅವರನ್ನು ಜಿಲ್ಲೆಗೆ ಕರೆತಂದಿದ್ದು, ಮೊದಲು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಪ್ರಕ್ರಿಯೆ ನಡೆಯಲಿದೆ.

ಹೀಗಾಗಿ ಎಎಸ್‌‍ಪಿ ವೆಂಕಟೇಶ್‌ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಏರ್ಪಡಿಸಲಾಗಿದೆ.ಮತದಾನ ಮುಕ್ತಾಯಗೊಂಡ ದಿನವೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು 43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ವಿಶೇಷ ತಂಡ ಕರೆತಂದಿದೆ.

RELATED ARTICLES

Latest News