Thursday, June 20, 2024
Homeರಾಷ್ಟ್ರೀಯಮೋದಿ ಹ್ಯಾಟ್ರಿಕ್ ಪ್ರಮಾಣವಚನ ಸಮಾರಂಭಕ್ಕೆ ಸಿದ್ದತೆ, 7 ಸುತ್ತಿನ ಭದ್ರತೆ

ಮೋದಿ ಹ್ಯಾಟ್ರಿಕ್ ಪ್ರಮಾಣವಚನ ಸಮಾರಂಭಕ್ಕೆ ಸಿದ್ದತೆ, 7 ಸುತ್ತಿನ ಭದ್ರತೆ

ನವದೆಹಲಿ,ಜೂ.8- ಪ್ರಧಾನಿ ನರೇಂದ್ರಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಾಳೆ ವಿವಿಧ ರಾಷ್ಟ್ರಗಳ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭೂತಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಏಳು ಸುತ್ತಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಬೆಳಗಿನಿಂದಲೇ ದ್ರೋಣ್‌ ಹಾರಾಟವನ್ನು ನಿಷೇಧ ಮಾಡಲಾಗಿದೆ. ಅಲ್ಲದೆ ರಾಷ್ಟ್ರಪತಿ ಭವನ, ಪ್ರಧಾನಮಂತ್ರಿ ನಿವಾಸ, ಸುಪ್ರೀಂಕೋರ್ಟ್‌ ಕಟ್ಟಡ, ರಾಯಭಾರಿಗಳ ಕಚೇರಿ ಸೇರಿದಂತೆ ಮತ್ತಿತರ ಕಡೆ ವಿಮಾನ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.

ಈ ಹಿಂದೆ ಜಿ-20 ಸಮಾವೇಶ ನಡೆದ ವೇಳೆ ಕೈಗೊಂಡಿದ್ದ ಭದ್ರತೆಯ ಮಾದರಿಯನ್ನು ಪ್ರಧಾನಿಯವರ ಪ್ರಮಾಣವಚನ ಸಮಾರಂಭಕ್ಕೂ ಅಷ್ಟೇ ಪ್ರಮಾಣದ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಸೇನಾ ಪಡೆ, ದೆಹಲಿ ಪೊಲೀಸರು,ಅರೆಸೇನಾ ಪಡೆ, ಎನ್‌ಎಚ್‌ಎ ಕಮಾಂಡೋ, ಶ್ವಾನದಳ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಾರ್ಕ್‌ ರಾಷ್ಟ್ರಗಳ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ತಂಗುವ ಪಂಚತಾರಾ ಹೋಟೆಲ್‌ಗಳಿಗೂ ಶನಿವಾರದಿಂದಲೇ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.ಪ್ರಮುಖವಾಗಿ ಲೀಲಾ ಪ್ಯಾಲೇಸ್‌‍, ತಾಜ್‌ ವೆಸ್ಟೆಂಡ್‌, ಐಟಿಸಿ ಮೌರ್ಯ, ಒಬರಾಯ್‌ ಸೇರಿದಂತೆ ಹಲವು ಕಡೆ ಭಾರೀ ಪ್ರಮಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕ್ಷಿಪ್ರ ಕಾರ್ಯಾಪಡೆ, ಎನ್‌ಎಚ್‌ಎ ಕಮಾಂಡೋ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಅಂದಾಜು 3 ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನಲೆಯಲ್ಲಿ ಸಂಚಾರಿ ದಟ್ಟಣೆಯನ್ನು ನಿಭಾಯಿಸಲು ಪ್ರಮುಖ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಏಳು ಸುತ್ತಿನ ಭದ್ರತೆ :
ಪ್ರಧಾನಿ ನರೇಂದ್ರಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಾಳೆ ವಿವಿಧ ರಾಷ್ಟ್ರಗಳ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭೂತಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಏಳು ಸುತ್ತಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಬೆಳಗಿನಿಂದಲೇ ದ್ರೋಣ್‌ ಹಾರಾಟವನ್ನು ನಿಷೇಧ ಮಾಡಲಾಗಿದೆ.

ಅಲ್ಲದೆ ರಾಷ್ಟ್ರಪತಿ ಭವನ, ಪ್ರಧಾನಮಂತ್ರಿ ನಿವಾಸ, ಸುಪ್ರೀಂಕೋರ್ಟ್‌ ಕಟ್ಟಡ, ರಾಯಭಾರಿಗಳ ಕಚೇರಿ ಸೇರಿದಂತೆ ಮತ್ತಿತರ ಕಡೆ ವಿಮಾನ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ಜಿ-20 ಸಮಾವೇಶ ನಡೆದ ವೇಳೆ ಕೈಗೊಂಡಿದ್ದ ಭದ್ರತೆಯ ಮಾದರಿಯನ್ನು ಪ್ರಧಾನಿಯವರ ಪ್ರಮಾಣವಚನ ಸಮಾರಂಭಕ್ಕೂ ಅಷ್ಟೇ ಪ್ರಮಾಣದ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

ಸೇನಾ ಪಡೆ, ದೆಹಲಿ ಪೊಲೀಸರು,ಅರೆಸೇನಾ ಪಡೆ, ಎನ್‌ಎಚ್‌ಎ ಕಮಾಂಡೋ, ಶ್ವಾನದಳ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಾರ್ಕ್‌ ರಾಷ್ಟ್ರಗಳ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ತಂಗುವ ಪಂಚತಾರಾ ಹೋಟೆಲ್‌ಗಳಿಗೂ ಶನಿವಾರದಿಂದಲೇ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಪ್ರಮುಖವಾಗಿ ಲೀಲಾ ಪ್ಯಾಲೇಸ್‌‍, ತಾಜ್‌ ವೆಸ್ಟೆಂಡ್‌, ಐಟಿಸಿ ಮೌರ್ಯ, ಒಬರಾಯ್‌ ಸೇರಿದಂತೆ ಹಲವು ಕಡೆ ಭಾರೀ ಪ್ರಮಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕ್ಷಿಪ್ರ ಕಾರ್ಯಾಪಡೆ, ಎನ್‌ಎಚ್‌ಎ ಕಮಾಂಡೋ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

ಅಂದಾಜು 3 ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನಲೆಯಲ್ಲಿ ಸಂಚಾರಿ ದಟ್ಟಣೆಯನ್ನು ನಿಭಾಯಿಸಲು ಪ್ರಮುಖ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

RELATED ARTICLES

Latest News