Thursday, June 20, 2024
Homeರಾಷ್ಟ್ರೀಯಲೋಕಸಭೆ ಚುನಾವಣೆಯಲ್ಲಿ ಮೋದಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕ ಸೋಲು : ಕಾಂಗ್ರೆಸ್‌‍

ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕ ಸೋಲು : ಕಾಂಗ್ರೆಸ್‌‍

ನವದೆಹಲಿ, ಜೂ.8- ಲೋಕಸಭೆ ಚುನಾವಣೆಯ ಜನಾದೇಶವು ಪ್ರಧಾನಿ ನರೇಂದ್ರ ಮೋದಿಯವರಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕ ಸೋಲು ಎಂದು ಕಾಂಗ್ರೆಸ್‌‍ ವಾಗ್ದಾಳಿ ನಡೆಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ, 543 ಸದಸ್ಯ ಬಲದ ಸದನದಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ಆದರೆ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟ (ಎನ್‌ಡಿಎ) ಒಟ್ಟಾಗಿ 293 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌‍ 99 ಸ್ಥಾನಗಳನ್ನು ಗೆದ್ದಿದೆ. ಮೋದಿಯವರಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕ ಸೋಲು ನೀಡಿದ ಜನಾದೇಶದಲ್ಲಿ ಬೆಳ್ಳಿಗೆರೆಗಳನ್ನು ಹುಡುಕುವ ಡೊಳ್ಳು ಕುಣಿತ ಆರಂಭವಾಗಿದೆ ಎಂದು ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಜವಾಹರಲಾಲ್‌ ನೆಹರು ನಂತರ ಸತತವಾಗಿ ಮೂರು ಬಾರಿ ಜನಾದೇಶ ಪಡೆದವರು ನರೇಂದ್ರ ಮೋದಿಯವರು ಎಂದು ಪ್ರಚಾರ ಮಾಡಲಾಗುತ್ತಿದೆ. ಪಕ್ಷವನ್ನು 240 ಸ್ಥಾನಗಳಿಗೆ ಮುನ್ನಡೆಸುವುದು ಮತ್ತು ಮೂರನೇ ಒಂದು ಭಾಗ ಪ್ರಧಾನ ಮಂತ್ರಿ ಜನಾದೇಶ ಹೇಗೆ ಎಂಬುದನ್ನು ವಿವರಿಸಲಾಗಿಲ್ಲ ಎಂದು ಕಾಂಗ್ರೆಸ್‌‍ ಮುಖಂಡರು ಹೇಳಿದ್ದಾರೆ.

ಇನ್ನೊಂದೆಡೆ ನೆಹರೂ ಅವರು 1952ರಲ್ಲಿ 364 ಸ್ಥಾನಗಳನ್ನು ಪಡೆದಿದ್ದರು, 957ರಲ್ಲಿ 371 ಸ್ಥಾನಗಳನ್ನು ಮತ್ತು 1962ರಲ್ಲಿ 361 ಸ್ಥಾನಗಳನ್ನು ಪಡೆದಿದ್ದರು. ಪ್ರತಿ ಬಾರಿ 2/3ನೇ ಬಹುಮತ. ಆದರೂ ಅವರು ಸಂಪೂರ್ಣ ಪ್ರಜಾಪ್ರಭುತ್ವವಾದಿಯಾಗಿ ಉಳಿದಿದ್ದರು. ತಮ ನಿರಂತರ ಉಪಸ್ಥಿತಿಯಿಂದ ಸಂಸತ್ತನ್ನು ಬಹಳ ಎಚ್ಚರಿಕೆಯಿಂದ ಪೋಷಿಸಿದರು ಎಂದಿದ್ದಾರೆ.

ನೆಹರೂ ನಂತರ ಸತತವಾಗಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಮೋದಿ ಅಲ್ಲ ಎಂದ ಅವರು, ಅಟಲ್‌ ಬಿಹಾರಿ ವಾಜಪೇಯಿ ಅವರು 1996, 1998 ಮತ್ತು 1999ರಲ್ಲಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಇಂದಿರಾ ಗಾಂಧಿಯವರು 1966, 1967, 1971 ಮತ್ತು 1980 ರಲ್ಲಿ 4 ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ. 2024ರಲ್ಲಿ ನರೇಂದ್ರ ಮೋದಿಯವರ ಕರುಣಾಜನಕ ಚುನಾವಣಾ ಸಾಧನೆಯನ್ನು ಸಮರ್ಥಿಸಲು ಡ್ರಮ್‌ಬೀಟರ್‌ಗಳು ಏನನ್ನೂ ಹುಡುಕುತ್ತಾರೆ ಎಂದು ರಮೇಶ್‌ ಪ್ರಶ್ನಿಸಿದರು.

RELATED ARTICLES

Latest News