Sunday, November 3, 2024
Homeಮನರಂಜನೆ"ಪ್ರಕರಣ ತನಿಖಾ ಹಂತದಲ್ಲಿದೆ" ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ

“ಪ್ರಕರಣ ತನಿಖಾ ಹಂತದಲ್ಲಿದೆ” ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ

Prakarana Tanikha Hantadallide Movie Review

ಜೀವನಗಳನ್ನೇ ನುಂಗಿ ನೀರು ಕುಡಿಯುವ ಮಾದಕ ವಸ್ತುಗಳ ಸಂಬಂಧಿಸಿದ ಸಿನಿಮಾಗಳು ಸಣ್ಣ ಬಜೆಟ್ ಮತ್ತು ಬಿಗ್ ಬಜೆಟ್ ನಲ್ಲಿ ಪ್ರೇಕ್ಷಕರ ಮುಂದೆ ಬಂದಿವೆ. ಎಷ್ಟೇ ಕಮರ್ಷಿಯಲ್ ಎಲಿಮೆಂಟ್ಸ್ ಒಳಗೊಂಡಿದ್ದರು ಈ ರೀತಿಯ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಇದ್ದೇ ಇರುತ್ತದೆ. ಈ ವಾರ ತೆರೆಕಂಡಿರುವ” ಪ್ರಕರಣ ತನಿಖಾ ಹಂತದಲ್ಲಿದೆ” ಚಿತ್ರದಲ್ಲಿ ಅದನ್ನು ಗಮನಿಸಬಹುದು

ಮಾದಕ ವಸ್ತು ಡೀಲ್ ಮಾಡುವ ಎರಡು ಗ್ಯಾಂಗ್‍ಗಳು ಮತ್ತು ಅದನ್ನು ಬೆನ್ನತ್ತಿ ಯಾರಿಗೂ ಗೊತ್ತಾಗದ ಹಾಗೆ ಅವರಿಗೆ ಕೊನೆಗಾಣಿಸುವ ಕಥಾಹಂದರ ಹೊಂದಿದೆ. ಮಂಗಳೂರಿಗೆ ಹಡಗಿನಲ್ಲಿ ಬರುವ ನೂರಾರು ಕೋಟಿ ಮೊತ್ತದ ಮಾದಕ ವಸ್ತು ಕಳ್ಳತನ ಮಾಡಿ ಅದನ್ನು ಬೇರೆ ಬೇರೆ ಕಡೆ ಸಾಗಾಟ ಮಾಡಬೇಕು ಎನ್ನವು ಗುರು ಇಟ್ಟುಕೊಂಡ ಇಬ್ಬರು ಖದೀಮರ ಕನಸು, ಆರಂಭದಲ್ಲಿ ಕೊಲೆಯಲ್ಲಿ ಆರಂಭವಾಗುತ್ತದೆ. ಆ ಕೊಲೆ ಯಾರು ಮಾಡಿದರು, ಅದರ ಹಿಂದಿರುವರು ಯಾರು ಎನ್ನುವ ಕುತೂಹಲ ಆರಂಭದಿಂದ ಕೊನೆ ತನಕ ಚಿತ್ರ ನೋಡಿಸಿಕೊಂಡು ಕರೆದೊಯ್ದಿದೆ.

ಸಹೋದರ ಗೌರವ್ ಇದ್ದಕ್ಕಿದ್ದಂತೆ ಹತ್ಯೆಯಾಗುತ್ತಾನೆ. ಇದು ಸಹಜವಾಗಿ ಅಣ್ಣ ವೈದ್ಯ ಭಾರ್ಗವ ಅವರಲ್ಲಿ ಆತಂಕ ಹೆಚ್ಚಿಸುತ್ತದೆ. ಪ್ರಕರಣದ ಬೆನ್ನುಹತ್ತಿದ ಖಡಕ್ ಪೊಲೀಸ್ ಅಧಿಕಾರಿ ಮಹೀನ್ ಕುಬೇರ್ ಒಂದೊಂದೇ ವಿಷಯವನ್ನು ಪತ್ತೆ ವಿಷಯ ಕೈಗೆತ್ತಿಕೊಳ್ಳುತ್ತಾನೆ.

ಚಾಣಾಕ್ಷ ಪೊಲೀಸ್ ಅಧಿಕಾರಿ ಪ್ರಕರಣವನ್ನು ಬೆನ್ನುಹತ್ತಿ ಅದನ್ನು ಕೊನೆಗೂ ಪತ್ತೆ ಹಚ್ಚುತ್ತಾನೆ. ಆದರೆ ಕೊಲೆ ಮಾಡಿದ ವ್ಯಕ್ತಿ ಯಾರು, ಅದನ್ನು ಯಾಕೆ ಮಾಡಿದ ಎನ್ನುವ ಸಂಗತಿ ತಿಳಿದು ಅಪರಾಧಿಯನ್ನು ಸುಮ್ಮನೆ ಬಿಡುತ್ತಾನೆ. ಆತ ಯಾಕೆ ಹಾಗೆ ಮಾಡಿದ, ಕೊಲೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಚಿತ್ರದ ಸಸ್ಪೆನ್ಸ್

ವೈದ್ಯನ ಪಾತ್ರದಲ್ಲಿ ನಟ ಚಿಂತನ್, ಪೊಲೀಸ್ ಅಧಿಕಾರಿಯಾಗಿ ಮಾಹಿನ್ ಕುಬೇರ್ ಪಾತ್ರಕ್ಕೆ ಜೀವ ತುಂಬಿದ್ದಾರೆ, ಉಳಿದಂತೆ ಮುತ್ತುರಾಜ್, ರಾಜ್ ಗಗನ್ ಮತ್ತಿತರು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.ಒಂದು ವಿಷಯದ ತನಿಖೆಯನ್ನು ಬೆನ್ನೇರಿ ಕಥೆಯ ಸಾಗುವ ವಿಧಾನ ರೋಮಾಂಚನವೆನಿಸುತ್ತದೆ

RELATED ARTICLES

Latest News