ಅಹಮದಾಬಾದ್, ಜ 24- ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಸುಮಾರು 500 ವರ್ಷಗಳ ಹಿಂದೆ ಮೊಘಲ್ ದೊರೆ ಬಾಬರ್ ಕಾಲದಲ್ಲಿ ಉಂಟಾದ ಆಳವಾದ ಗಾಯಕ್ಕೆ ಹೊಲಿಗೆ ಹಾಕಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್‍ನ ಅಹಮದಾಬಾದ್‍ನ ರಾನಿಪ್ ಪ್ರದೇಶದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ರಾಮಜಿ ದೇವಸ್ಥಾನದಲ್ಲಿ ಮಂಗಳವಾರ ಪುನಃ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಶೀ ಬಾಲರಾಮನ ಪ್ರಾಣ ಪ್ರತಿಷ್ಠಾ ಮಾಡುವ ಮೂಲಕ ಗಮನಾರ್ಹ ಕೆಲಸ ಮಾಡಿದ್ದಾರೆ.
ಕಳೆದ 500 ವರ್ಷಗಳಿಂದ ವಿಶ್ವದಾದ್ಯಂತ ಶ್ರೀರಾಮನ ಭಕ್ತರು ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಶ್ರೀರಾಮನನ್ನು ನೋಡುವುದು ಯಾವಾಗ ಎಂದು ಅವರು ಕೇಳುತ್ತಿದ್ದರು. ಈಗ ಭವ್ಯವಾದ ದೇವಾಲಯ ಕಂಗೊಳಿಸುತ್ತಿದೆ ಈ ಘಟನೆಯನ್ನು ನೋಡಿದಾಗ ಬಾಬರ್‍ನ ಕಾಲದಲ್ಲಿ ನಮ್ಮ ಹೃದಯದಲ್ಲಿ ಆಗಿದ್ದ ಆಳವಾದ ಗಾಯಕ್ಕೆ ಈಗ ಹೊಲಿಗೆ ಮಾಡಿದಂತಾಗಿದೆ ಎಂದು ಷಾ ಹೇಳಿದರು.
ಈ ವರ್ಷವೂ ಮುಂದುವರೆಯಲಿದೆ ಭಾರತ ಆರ್ಥಿಕ ಪ್ರಾಬಲ್ಯ
2014ರ ಹಿಂದಿನ ಕಾಂಗ್ರೆಸ್ ಸರ್ಕಾರ ದೇಶದ ಸಂಸ್ಕøತಿ, ಧರ್ಮ ಮತ್ತು ಭಾಷೆಗಳನ್ನು ಗೌರವಿಸಲು ಹೆದರುತ್ತಿದ್ದವು.ಔರಂಗಜೇಬನು ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸ ಮಾಡಿದನು. ಇಷ್ಟು ವರ್ಷಗಳ ನಂತರ ಅದನ್ನು ಪುನಃ ನಿರ್ಮಿಸಿದ ಮತ್ತು ಅಲ್ಲಿ ಎಲ್ಲಾ ಭಕ್ತರಿಗೆ ಅನುಕೂಲತೆಗಳನ್ನುಮಾಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು ಎಂದು ಗೃಹ ಸಚಿವರು ಹೇಳಿದರು.
ಬಾಬರ್ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿದ್ದಾನೆ. ಈಗ ಅಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿದೆ ಜೈ ಶ್ರೀರಾಮ್ ಘೋಷಣೆಗಳ ಮೊಳಗಿದೆ ಎಂದರು.