Friday, May 3, 2024
Homeರಾಜಕೀಯಕಾಂಗ್ರೆಸ್‍ನ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ : ಟಿಎಂಸಿ

ಕಾಂಗ್ರೆಸ್‍ನ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ : ಟಿಎಂಸಿ

ನವದೆಹಲಿ, ಜ.24- ಅಸ್ಸಾಂನಲ್ಲಿ ರಾಹುಲ್ ಗಾಂದಿ ನಡೆಸುತ್ತಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ಟಿಎಂಸಿ ಅ„ಕೃತವಾಗಿ ಭಾಗವಹಿಸಲಿಲ್ಲ, ಆದರೂ ಕೆಲವು ಕಾರ್ಯಕರ್ತರು ತಮ್ಮ ವೈಯಕ್ತಿಕ ಸಾಮಥ್ರ್ಯದಲ್ಲಿ ಸೇರಿಕೊಂಡಿರಬಹುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಕಾರ್ಯಕರ್ತರು ಮತ್ತು ಮುಖಂಡರು ಬೆಂಬಲ ನೀಡಿದ್ದಾರೆ ಎಂದು ರಾಜ್ಯ ಘಟಕದ ಮುಖ್ಯಸ್ಥರು ಹೇಳಿದ ಕೆಲವೇ ಗಂಟೆಗಳ ನಂತರ ತೃಣಮೂಲ ಕಾಂಗ್ರೆಸ್ ಹಿರಿಯ ನಯಕರು ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಬದಲಿ ಹೇಳಿಕೆ ನೀಡಿದ್ದಾರೆ.ಸೀಟು ಹಂಚಿಕೆ ಕುರಿತು ಮೊದಲು ಮಾತುಕತೆ ನಡೆಸಬೇಕಿದೆ ನಂತರ ಉಳಿದ ಹೋರಾಟ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಾಬರ್‌ನ ಕಾಲದಲ್ಲಿ ಉಂಟಾದ ಗಾಯಕ್ಕೆ ರಾಮ ಮಂದಿರ ಹೊಲಿಗೆ ಹಾಕಿದೆ : ಅಮಿತ್ ಶಾ

ರಾಹುಲ್ ಯಾತ್ರೆ ಅಸ್ಸಾಂ ನಿಂದ ಪಶ್ಚಿಮ ಬಂಗಾಳಕ್ಕೆ ಜ.25 ರಂದು ದುಬ್ರಿ ಮೂಲಕ ಕೂಚ್ ಬೆಹಾರ್ ತಲುಪುವ ಸಾಧ್ಯತೆಯಿದೆ.ನಿನ್ನೆ ತೃಣಮೂಲ ಕಾಂಗ್ರೆಸ್ ಧ್ವಜಗಳನ್ನು ಹೊತ್ತಿರುವ ಕೆಲವರು ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ, ಅಸ್ಸಾಂ ಘಟಕದ ಮುಖ್ಯಸ್ಥ ರಿಪುನ್ ಬೋರಾ ಅವರು ತಮ್ಮ ಸಾಮಜಿಕ ತಾಣದಲ್ಲಿ ತಮ್ಮ ಪಕ್ಷದ ಸದಸ್ಯರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಖಚಿತಪಡಿಸಿದ್ದರು ಆದರೆ ಕೆಲವೇ ಗಂಟೆಯಲ್ಲಿ ಟಿಎಂಸಿ ಕಾರ್ಯಕರ್ತರ ಚಿತ್ರಗಳನ್ನು ಹೊಂದಿರುವ ಚಿತ್ರದ ತಮ್ಮ ಪೋಸ್ಟ್ ಅನ್ನು ಅಳಿಸಿದ್ದಾರೆ.

ಕಾಂಗ್ರೆಸ್‍ನ ರಾಹುಲ್ ಗಾಂ„ ನೇತೃತ್ವದ ಯಾತ್ರೆಯಲ್ಲಿ ಟಿಎಂಸಿ ಅ„ಕೃತವಾಗಿ ಭಾಗವಹಿಸಲಿಲ್ಲ, ಆದರೂ ಕೆಲವು ಕಾರ್ಯಕರ್ತರು ತಮ್ಮ ವೈಯಕ್ತಿಕ ಸಾಮಥ್ರ್ಯದಲ್ಲಿ ಸೇರಿಕೊಂಡಿರಬಹುದುಸೀಟು ಹಂಚಿಕೆಯ ಮಾತುಕತೆಗಳು ಆದ್ಯತೆಯಾಗಿ ಉಳಿದಿವೆ ಮತ್ತು ಮೊದಲು ಗಮನಹರಿಸಬೇಕಾಗಿದೆ ಎಂದು ಟಿಎಂಸಿ ನಾಯಕ ಒತ್ತಿ ಹೇಳಿದ್ದಾರೆ.

ಬೋರಾ ಅವರು ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ರಾಜ್ಯಸಭಾ ಸಂಸದರಾಗಿದ್ದು, ಅವರು ಟಿಎಂಸಿ ಸೇರಲು ಪಕ್ಷವನ್ನು ಬದಲಾಯಿಸಿದ್ದರು. ಟಿಎಂಸಿಯು ಕೇವಲ ಎರಡು ಸ್ಥಾನಗಳನ್ನು ನೀಡಿದ ನಂತರ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಮಾತುಕತೆ ಬಿಕ್ಕಟ್ಟಿಗೆ ಸಿಲುಕಿದ್ದಾರೆ.

RELATED ARTICLES

Latest News