Monday, October 14, 2024
Homeರಾಷ್ಟ್ರೀಯ | Nationalಭಾರತ್ ನ್ಯಾಯ ಯಾತ್ರೆಗೆ ಭದ್ರತೆ ನೀಡುವಂತೆ ಅಮಿತ್ ಷಾಗೆ ಖರ್ಗೆ ಪತ್ರ

ಭಾರತ್ ನ್ಯಾಯ ಯಾತ್ರೆಗೆ ಭದ್ರತೆ ನೀಡುವಂತೆ ಅಮಿತ್ ಷಾಗೆ ಖರ್ಗೆ ಪತ್ರ

ನವದೆಹಲಿ, ಜ.24- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ನ್ಯಾಯ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಲು ಸಂಬಂಧಪಟ್ಟ ಪೊಲೀಸರಿಗೆ ನಿರ್ದೇಶನ ನೀಡುವಂತೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದಾರೆ.

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎದುರಿಸಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಪತ್ರದ ಮೂಲಕ ಸೂಕ್ತ ಭದ್ರತೆ ನೀಡಲು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಸಭೆಯ ವಿರೋಧಪಕ್ಷ ನಾಯಕರೂ ಆಗಿರುವ ಖರ್ಗೆ ಮಂಗಳವಾರ ರಾತ್ರಿ ಬರೆದ ಪತ್ರವು ಕಾಂಗ್ರೆಸ್ ನಾಯಕನ ಸುರಕ್ಷತೆಯ ಬಗ್ಗೆ ಮೂಡಿರುವ ಕಳವಳವನ್ನು ಎತ್ತಿ ಹೇಳಿದೆ.

ಜನವರಿ 22ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಗಾವಲು ಪಡೆಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಅಸ್ಸಾಂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಕಾರ್ಯಕರ್ತರ ಬೆಂಗಾವಲು ವಾಹನವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.ಹೀಗಾಗಿ ರಾಹುಲ್ ಗಾಂ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ. ಮಂಗಳವಾರ ಗುವಾಹಟಿಯ ಹೊರವಲಯದಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ ನಂತರ ಅಮಿತ್‍ಶಾಗೆ ಅವರು ಪತ್ರ ಬರೆದಿದ್ದಾರೆ.

ಕಾಂಗ್ರೆಸ್‍ನ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ : ಟಿಎಂಸಿ

ಶಾ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಹಾಗೂ ಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ದೈಹಿಕ ಹಾನಿಗೆ ಕಾರಣವಾಗುವ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರನ್ನು ವಿನಂತಿಸುತ್ತೇನೆ ಎಂದಿದ್ದಾರೆ.

ಭಾರತ್ ಜೋಡೋ ನ್ಯಾಯ ಯಾತ್ರೆಯು ಜನವರಿ 14 ರಂದು ಮಣಿಪುರದ ಇಂಫಾಲ್‍ನಿಂದ ಪ್ರಾರಂಭವಾಯಿತು. ಮುಂಬೈನಲ್ಲಿ ಕೊನೆಗೊಳ್ಳುವ ಈ ಯಾತ್ರೆ 6,700 ಕಿಲೋಮೀಟರ್‍ಗಳನ್ನು ಕ್ರಮಿಸಲು ಸಿದ್ಧವಾಗಿದೆ. ಸಮಾಜದ ದುರ್ಬಲ ವರ್ಗಗಳನ್ನು ಒಗ್ಗೂಡಿಸುವುದರೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಕಾರ್ಮಿಕ ಕಾನೂನುಗಳ ನಿರ್ವಹಣೆ ಮತ್ತು ವಿರೋಧ ಪಕ್ಷದವರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋ ನೀತಿಗಳನ್ನು ಜನರಿಗೆ ವಿವರಿಸಲು ಕಾಂಗ್ರೆಸ್ ಈವಯಾತ್ರೆಯನ್ನು ವೇದಿಕೆಯಾಗಿಸಿಕೊಂಡಿದೆ.

RELATED ARTICLES

Latest News