Sunday, December 29, 2024
Homeರಾಷ್ಟ್ರೀಯ | Nationalಮನಮೋಹನ್‌ ಸಿಂಗ್‌ ಸ್ಮಾರಕ ನಿರ್ಮಾಣ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ

ಮನಮೋಹನ್‌ ಸಿಂಗ್‌ ಸ್ಮಾರಕ ನಿರ್ಮಾಣ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ

Pranab Mukherjee's Daughter Slams Congress Amid Manmohan Singh Memorial Row

ನವದೆಹಲಿಕ,ಡಿ.28- ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಪ್ರತ್ಯೇಕ ಸ್ಮಾರಕ ನಿರ್ಮಾಣ ಸಂಬಂಧ ಕಾಂಗ್ರೆಸ್‌‍, ಆಡಳಿತಾರೂಢ ಬಿಜೆಪಿ ವಿರುದ್ಧ ತಿರುಗಿಬಿದ್ದಿದೆ. ಮತ್ತೊಂದು ವಿಶೇಷವೆಂದರೆ ಕಾಂಗ್ರೆಸ್‌‍ ವಿರುದ್ಧವೇ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣವ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಸ್ವಪಕ್ಷೀಯರ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ತಮ ತಂದೆ ಮತ್ತು ಮಾಜಿ ರಾಷ್ಟ್ರಪತಿ 2020ರ ಆಗಸ್ಟ್‌ನಲ್ಲಿ ನಿಧನರಾದಾಗ, ಕಾಂಗ್ರೆಸ್‌‍ ನಾಯಕತ್ವವು, ಕಾಂಗ್ರೆಸ್‌‍ ಕಾರ್ಯಕಾರಿ ಸಮಿತಿಯ ಸಂತಾಪ ಸೂಚಕ ಸಭೆ ಕರೆಯಲೂ ಸಹ ಯೋಚಿಸಲಿಲ್ಲ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಕಾಂಗ್ರೆಸ್‌‍ ನಾಯಕತ್ವವು ತನ್ನನ್ನು ದಾರಿ ತಪ್ಪಿಸಿದೆ ಎಂದು ಅವರು ಆರೋಪಿಸಿದ್ದು, ಭಾರತೀಯ ರಾಷ್ಟ್ರಪತಿಗಳಿಗೆ ಸಂತಾಪ ಸಭೆ ಕರೆಯಬೇಕಿಲ್ಲ ಎಂದು ಕಾಂಗ್ರೆಸ್‌‍ ಹಿರಿಯ ನಾಯಕರೊಬ್ಬರು ಹೇಳಿದ್ದರಂತೆ.

ಇನ್ನೊಬ್ಬ ಮಾಜಿ ರಾಷ್ಟ್ರಪತಿ ಕೆಆರ್‌ ನಾರಾಯಣನ್‌ ಅವರ ನಿಧನದ ನಂತರ, ಸಿಡಬ್ಲ್ಯೂಸಿ ಸಭೆ ಕರೆಯಲಾಯಿತು. ಬೇರೆ ಯಾರೂ ಅಲ್ಲ ಪ್ರಣಬ್‌ ಮುಖರ್ಜಿ ಅವರಿಂದ ಸಂತಾಪ ಸಂದೇಶವನ್ನು ರಚಿಸಲಾಯಿತು ಎಂದು ಅವರು ತಮ ತಂದೆಯ ಡೈರಿಗಳಿಂದ ತಿಳಿದುಕೊಂಡರೆಂದು ಶರ್ಮಿಷ್ಠಾ ಹೇಳಿದ್ದಾರೆ.

ಶರ್ಮಿಷ್ಠಾ ಮುಖರ್ಜಿ ಅವರು ಬಿಜೆಪಿಯ ಸಿ.ಆರ್‌.ಕೇಶವನ್‌ ಅವರ ಪೋಸ್ಟ್‌ ಅನ್ನು ಉಲ್ಲೇಖಿಸಿದ್ದಾರೆ, ಅವರು ಗಾಂಧಿ ಕುಟುಂಬದ ಸದಸ್ಯರಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್‌‍ ಪಕ್ಷದಿಂದ ಇತರ ರಾಜ್ಯಗಳನ್ನು ಹೇಗೆ ಕಡೆಗಣಿಸಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ಪಿ.ವಿ.ನರಸಿಂಹರಾವ್‌ ಸ್ಮಾರಕ ವಿವಾದ?:
ಈ ವಿಷಯದ ಕುರಿತು, 2004ರಿಂದ 2009ರವರೆಗೆ ಡಾ. ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರ ಮತ್ತು ಫೈನಾನ್ಶಿಯಲ್‌ ಎಕ್ಸ್ಪ್ರೆಸ್‌‍ನ ಮಾಜಿ ಪ್ರಧಾನ ಸಂಪಾದಕ ಡಾ.ಸಂಜಯ ಬಾರು ಬರೆದ ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಪುಸ್ತಕದ ಒಂದು ಅಧ್ಯಾಯವನ್ನು ಉಲ್ಲೇಖಿಸಲಾಗಿದೆ. 2004ರಲ್ಲಿ ಕಾಂಗ್ರೆಸ್‌‍ ನೇತೃತ್ವದ ಯುಪಿಎ ಸರ್ಕಾರವು ದೆಹಲಿಯಲ್ಲಿ ನಿಧನರಾದ ಮಾಜಿ ಪ್ರಧಾನಿ ದಿವಂಗತ ಪಿ.ವಿನರಸಿಂಹರಾವ್‌ ಅವರ ಸ್ಮಾರಕವನ್ನು ಏಕೆ? ನಿರ್ಮಿಸಲಿಲ್ಲ ಎಂಬುದನ್ನು ಪ್ರಸ್ತಾಪಿಸಿದರು.

2004ರಿಂದ 2014ರವರೆಗೆ ಕಾಂಗ್ರೆಸ್‌‍ ಅಧಿಕಾರದಲ್ಲಿದ್ದರೂ ನರಸಿಂಹರಾವ್‌ ಅವರ ಸಾರಕವನ್ನು ನಿರ್ಮಿಸಲಿಲ್ಲ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆಯಬೇಕೆಂಬ ಬಯಕೆಯೂ ಕಾಂಗ್ರೆಸ್‌‍ಗೆ ಇಲ್ಲ. ಬದಲಿಗೆ ಅವರ ಜನಸ್ಥಳವಾದ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಡಾ.ಬಾರು ತಮ ಪುಸ್ತಕದಲ್ಲಿ ಹೇಳಿದ್ದಾರೆ.

RELATED ARTICLES

Latest News