Thursday, April 10, 2025
Homeರಾಷ್ಟ್ರೀಯ | Nationalಕೋಲುಗಳಿಂದ ಹೊಡೆದು ಅರ್ಚಕನ ಕೊಲೆ

ಕೋಲುಗಳಿಂದ ಹೊಡೆದು ಅರ್ಚಕನ ಕೊಲೆ

ಡಿಯೋರಿಯಾ (ಯುಪಿ), ಮೇ 1- ದೇವಸ್ಥಾನದ ಅರ್ಚಕರು ಜೋರಾಗಿ ಸಂಗೀತ ನುಡಿಸುತ್ತಿತ್ತಾಗ ಅಲ್ಲಿಗೆ ಬಂದ ಕೆಲವರು ಕೋಲುಗಳಿಂದ ಹೊಡೆದು ಕೊಂದಿರುವ ಘಟನೆ ತೆನುಬಾ ಚೌಬೆ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಅಶೋಕ್‌ ಚೌಬೆ (60) ಕೊಲೆಯಾದ ಅರ್ಚಕ.

ಸಂಗೀತ ನುಡಿಸುವ ವಿಚಾರದಲ್ಲಿ ಅಲ್ಲಿಗೆ ಬಂದ ಕೆಲವರು ವಾಗ್ವಾದ ನಡೆಸಿ ಲಾಠಿಯಿಂದ ಥಳಿಸಿದ್ದಾರೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಚೌಬೆಯನ್ನು ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು, ಅಲ್ಲಿ ಅವನು ಕೊನೆಯುಸಿರೆಳೆದಿದ್ದಾರೆ ಎಂದು ಘೋಷಿಸಲಾಯಿತು ಎಂದು ಎಸ್ಪಿ ಹೇಳಿದರು.

ಸ್ಥಳೕಯ ಗ್ರಾಮದ ಹೌಸ್ಲಾ ಪಾಸ್ವಾನ್‌ ಎಂಬಾತ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ .ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಹಾಗೂ ದೇವಸ್ಥಾನದಲ್ಲಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ ಎಂದರು. ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News