Saturday, July 27, 2024
Homeಅಂತಾರಾಷ್ಟ್ರೀಯಐತಿಹಾಸಿಕ ಗೆಲುವು ಪ್ರಧಾನಿ ಮೋದಿಗೆ ವಿಶ್ವ ನಾಯಕರಿಂದ ಅಭಿನಂದನೆ

ಐತಿಹಾಸಿಕ ಗೆಲುವು ಪ್ರಧಾನಿ ಮೋದಿಗೆ ವಿಶ್ವ ನಾಯಕರಿಂದ ಅಭಿನಂದನೆ

ಕೊಲಂಬೊ, ಜೂನ್‌. 5-ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ,ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ಸೇರಿದಂತೆ ಹಲವಾರು ವಿಶ್ವ ನಾಯಕರು ಭಾರತದ ಮಹಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. 543 ಸದಸ್ಯರ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತದ 272 ಕ್ಕಿಂತ ಮೇಲಿದೆ, ಆದರೆ ಬಿಜೆಪಿ 2014 ರಿಂದ ಮೊದಲ ಬಾರಿಗೆ ಮ್ಯಾಜಿಕ್‌ ಸಂಖ್ಯೆ ಏಕಾಂಗಿಯಾಗಿ ಮುಟ್ಟುವಲ್ಲಿ ಹಿಂದೆ ಬಿದ್ದಿದೆ.

ಚುನಾವಣಾ ವಿಜಯಕ್ಕಾಗಿ ಅವರಿಗೆ ಅಭಿನಂದನೆಗಳು ಮತ್ತು ಒಳ್ಳೆಯ ಕೆಲಸಕ್ಕಾಗಿ ನನ್ನ ಆತ್ಮೀಯ ಹಾರೈಕೆಗಳು. ಇಟಲಿ ಮತ್ತು ಭಾರತವನ್ನು ಒಂದುಗೂಡಿಸುವ ಸ್ನೇಹವನ್ನು ಬಲಪಡಿಸಲು ಮತ್ತು ನಮನ್ನುಒಂದು ಗೂಡಿಸುವ ವಿವಿಧ ವಿಷಯಗಳಲ್ಲಿ ಸಹಕಾರವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ದು ಖಚಿತವಾಗಿಎಂದು ಮೆಲೋನಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿಗಾಗಿ ಲಂಕಾಅಧ್ಯಕ್ಷ ವಿಕ್ರಮಸಿಂಘೆ ಅವರು ತಮ್ಮ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದರು, ಮೋದಿಯವರ ನಾಯಕತ್ವದಲ್ಲಿ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಭಾರತೀಯ ಜನರ ವಿಶ್ವಾಸವನ್ನು ಪ್ರದರ್ಶಿಸಿದ್ದಾರೆ .ಶ್ರೀಲಂಕಾ ಭಾರತದೊಂದಿಗೆ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

ನೇಪಾಳದ ಪ್ರಧಾನಿ ಪ್ರಚಂಡ ಅವರು, ಜನಾದೇಶದಲ್ಲಿ ಯಶಸ್ಸಿಗಾಗಿಮೋದಿಯವರನ್ನು ಅಭಿನಂದಿಸಿದ್ದಾರೆ ಸತತ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗುತ್ತಿರುವುದಕ್ಕು ಅಭಿನಂದನೆಗಳು. ಭಾರತದ ಜನರ ಉತ್ಸಾಹದಿಂದ ಭಾಗವಹಿಸುವಿಕೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ನಾವು ಸಂತೋಷಪಡುತ್ತೇವೆ ಎಂದು ಹೇಳಿದರು.

ಮೋದಿ ಅವರ ಐತಿಹಾಸಿಕ ಗೆಲುವಿಗೆ ಮಾರಿಷಸ್‌‍ ಪ್ರಧಾನಿ ಪ್ರವಿಂದ್‌ ಕುಮಾರ್‌ ಜುಗ್ನಾಥ್‌ ಅಭಿನಂದನೆ ಸಲ್ಲಿಸಿದ್ದಾರೆ.ಐತಿಹಾಸಿಕ ಮೂರನೇ ಅವಧಿಗೆ ನಿಮ್ಮ ಶ್ಲಾಘನೀಯ ಗೆಲುವಿಗೆ ಅಭಿನಂದನೆಗಳು ಪ್ರಧಾನಿ ಮೋದಿ ಜೀ . ನಿಮ್ಮ ಚುಕ್ಕಾಣಿಯಲ್ಲಿ, ಅತಿದೊಡ್ಡ ಪ್ರಜಾಪ್ರಭುತ್ವವು ಗಮನಾರ್ಹ ಪ್ರಗತಿಯನ್ನು ಸಾಧಿಸುವುದನ್ನು ಮುಂದುವರಿಸುತ್ತದೆ. ಮಾರಿಷಸ್‌‍-ಭಾರತದ ವಿಶೇಷ ಸಂಬಂಧವು ಚಿರಾಯುವಾಗಲಿ ಎಂದು ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಾಲ್ಡೀವ್‌ಸ್‌‍ ಅಧ್ಯಕ್ಷ ಡಾ ಮೊಹಮ್ಮದ್‌ ಮುಯಿಝು ಕೂಡ ಮೋದಿಯವರನ್ನು ಅಭಿನಂದಿಸಿ,ದ್ವಿಪಕ್ಷೀಯ ಬಾಂಧವ್ಯವನ್ನು ಮುನ್ನಡೆಸಲು ಭಾರತದ ಪ್ರಧಾನ ಮಂತ್ರಿಯೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು.

RELATED ARTICLES

Latest News