Monday, March 31, 2025
Homeರಾಷ್ಟ್ರೀಯ | Nationalಏಪ್ರಿಲ್ 5ರಂದು ಶ್ರೀಲಂಕಾಗೆ ಪ್ರಧಾನಿ ನರೇಂದ್ರಮೋದಿ ಭೇಟಿ

ಏಪ್ರಿಲ್ 5ರಂದು ಶ್ರೀಲಂಕಾಗೆ ಪ್ರಧಾನಿ ನರೇಂದ್ರಮೋದಿ ಭೇಟಿ

Prime Minister Narendra Modi to visit Sri Lanka on April 5

ನವದೆಹಲಿ, ಮಾ.23-ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಏಪ್ರಿಲ್ 5ರಂದು ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ. ಭಾರತದ ಪ್ರಧಾನಿ ಭೇಟಿಯ ಸಮಯದಲ್ಲಿಯೇ ತ್ರಿಕೋನಮಲಿಯ ಪೂರ್ವ ಬಂದರು ಜಿಲ್ಲೆಯಲ್ಲಿ ಸಂಪೂರ್ ವಿದ್ಯುತ್‌ ಸ್ಥಾವರದ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಸಂಸತ್ತಿಗೆ ತಿಳಿಸಿದ್ದಾರೆ.

ಕಳೆದ ತಿಂಗಳು, ಶ್ರೀಲಂಕಾ ಮತ್ತು ಭಾರತ ದ್ವೀಪ ರಾಷ್ಟ್ರದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿವೆ ಎಂದು ಆರೋಗ್ಯ ಸಚಿವೆ ನಲಿಂದಾ ಜಯಥಿಸ್ಸಾ ಘೋಷಿಸಿದ್ದರು. ಶ್ರೀಲಂಕಾ ಸರ್ಕಾರ ಮತ್ತು ಭಾರತ ಸರ್ಕಾರವು ತ್ರಿಕೋನಮಲಿಯ ಸಂಪೂರ್‌ನ್ನಲ್ಲಿ 50 ಮೆಗಾವ್ಯಾಟ್ (ಹಂತ 1) ಮತ್ತು 70 ಮೆಗಾವ್ಯಾಟ್
(ಹಂತ 2) ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಒಮ್ಮತಕ್ಕೆ ಬಂದಿವೆ.

ಇದಕ್ಕೂ ಮೊದಲು, ಭಾರತದ ಎನ್‌ಟಿಪಿಸಿ ಅದೇ ಸ್ಥಳದಲ್ಲಿ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ನಿರ್ಮಿಸಬೇಕಿತ್ತು. ಹೊಸ ಜಂಟಿ ಉದ್ಯಮವು ಅದನ್ನು ಸೌರ ವಿದ್ಯುತ್ ಕೇಂದ್ರವಾಗಿ ಪರಿವರ್ತಿಸುತ್ತಿದೆ.

ಕಳೆದ ವಾರ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಅವರು ಕಳೆದ ವರ್ಷ ಅಧ್ಯಕ್ಷ ದಿಸಾನಾಯಕೆ ಅವರ ದೆಹಲಿ ಭೇಟಿಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಅಂತಿಮಗೊಳಿಸಲು ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದರು.

RELATED ARTICLES

Latest News