Sunday, June 30, 2024
Homeರಾಷ್ಟ್ರೀಯನನ್ನ ದೆಹಲಿ ನಿವಾಸದ ಮೇಲೆ ಕಿಡಿಗೇಡಿಗಳು ಮಸಿ ಎರಚಿದ್ದಾರೆ : ಓವೈಸಿ

ನನ್ನ ದೆಹಲಿ ನಿವಾಸದ ಮೇಲೆ ಕಿಡಿಗೇಡಿಗಳು ಮಸಿ ಎರಚಿದ್ದಾರೆ : ಓವೈಸಿ

ನವದೆಹಲಿ,ಜೂ.28- ದೆಹಲಿಯಲ್ಲಿರುವ ತಮ ನಿವಾಸದ ಮೇಲೆ ಕಿಡಿಗೇಡಿಗಳು ಮಸಿ ಎರಚಿದ್ದಾರೆ. ಆಗಾಗ ನನ್ನ ಮನೆಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಲೋಕಸಭೆ ಸಂಸದ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಿನ್ನೆ ಕೆಲವು ಕೆಲ ದುಷ್ಕರ್ಮಿಗಳು ನನ್ನ ಮನೆ ಮೇಲೆ ಮಸಿ ಎರಚಿದ್ದಾರೆ. ದೆಹಲಿಯಲ್ಲಿರುವ ನನ್ನ ಮನೆಯನ್ನು ಆಗಾಗ ಟಾರ್ಗೆಟ್‌ ಮಾಡಲಾಗುತ್ತಿದೆ. ಈ ಬಗ್ಗೆ ದೆಹಲಿ ಪೊಲೀಸ್‌‍ ಅಧಿಕಾರಿಗಳಿಗೆ ತಿಳಿಸಿದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರು.

ಗೃಹ ಸಚಿವ ಅಮಿತ್‌ ಶಾ ಮತ್ತು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಟ್ಯಾಗ್‌ ಮಾಡಿರುವ ಓವೈಸಿ, ಗೃಹ ಸಚಿವರ ಮೇಲ್ವಿಚಾರಣೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ಓಂ ಬಿರ್ಲಾ ಅವರನ್ನು ಟ್ಯಾಗ್‌ ಮಾಡಿ, ಸಂಸದರ ಸುರಕ್ಷತೆಯ ಭರವಸೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದಿದ್ದಾರೆ.

ನನ್ನ ಮನೆಯನ್ನು ಗುರಿಯಾಗಿಸುವ ಸಣ್ಣ-ಪುಟ್ಟ ಗೂಂಡಾಗಳಿಗೆ ನಾನು ಹೆದರುವುದಿಲ್ಲ. ಸಾವರ್ಕರ್‌ ಮಾದರಿಯ ಈ ಹೇಡಿತನದ ಕೃತ್ಯವನ್ನು ನಿಲ್ಲಿಸಿ. ಮಸಿ ಎರಚಿದ ನಂತರ ಅಥವಾ ಕಲ್ಲು ತೂರಾಟ ಮಾಡಿದ ನಂತರ ಓಡಿಹೋಗಬೇಡಿ. ನನ್ನನ್ನು ಎದುರಿಸಲು ಧೈರ್ಯ ಮಾಡಿ ಎಂದು ಸವಾಲು ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೈ ಪ್ಯಾಲೆಸ್ತೀನ್‌ ಘೋಷಣೆ ಕೂಗಿದ್ದು ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಹಲವು ಬಿಜೆಪಿ ನಾಯಕರು ಓವೈಸಿ ವಿರುದ್ಧ ಕಿಡಿಕಾರಿದ್ದರು.

ದೆಹಲಿಯ ಅಶೋಕ ರಸ್ತೆಯ ಬಳಿ ಇರುವ ಓವೈಸಿ ಮನೆ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿದೆ. ಕಳೆದ ವರ್ಷವೂ ಆಗಸ್ಟ್‌ ತಿಂಗಳಿನಲ್ಲಿ ಅವರ ನಿವಾಸದ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. 2022ರಲ್ಲಿ ಉತ್ತರ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಗುಂಡು ಹಾರಿಸಲಾಗಿತ್ತು.

RELATED ARTICLES

Latest News