Saturday, July 27, 2024
Homeರಾಷ್ಟ್ರೀಯಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್‌ ಪರ ಗೀಚುಬರಹ

ಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್‌ ಪರ ಗೀಚುಬರಹ

ನವದೆಹಲಿ, ಮೇ 12 (ಪಿಟಿಐ) ದೆಹಲಿಯ ಕರೋಲ್‌ ಬಾಗ್‌ ಮತ್ತು ಝಾಂಡೇವಾಲನ್‌ ಮೆಟ್ರೋ ನಿಲ್ದಾಣಗಳ ಕೆಲವು ಕಂಬಗಳಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಖಲಿಸ್ತಾನ್‌ ಪರ ಗೀಚುಬರಹ ಮತ್ತು ಘೋಷಣೆಗಳು ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ಳಂ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳ ಕೆಲ ಕಂಬಗಳ ಮೇಲೆ ಖಲಿಸ್ತಾನ್‌ ಪರ ಗೀಚು ಬರಹಗಳು ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬರಹದಲ್ಲಿ ಮೋದಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ತಿಳಿದುಬಂದಿದೆ.

ಗೋಡೆ ಬರಹ ಮತ್ತು ಘೋಷಣೆಗಳನ್ನು ತೆಗೆದುಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ವಿಷಯದ ತನಿಖೆಗಾಗಿ ತಂಡಗಳನ್ನು ರಚಿಸಿದ್ದೇವೆ. ಪೊಲೀಸ್‌‍ ತಂಡಗಳು ಅಪರಾಧಿಗಳನ್ನು ಗುರುತಿಸಲು ಮತ್ತು ಅವರನ್ನು ಹಿಡಿಯಲು ಪ್ರದೇಶ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್‌ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಿಡಿಗೇಡಿಗಳು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

RELATED ARTICLES

Latest News