Sunday, June 23, 2024
Homeಬೆಂಗಳೂರುಪ್ರೊಫೆಸರ್ ಕಾರು ಡಿಕ್ಕಿ : ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರಿಗೆ ಗಾಯ

ಪ್ರೊಫೆಸರ್ ಕಾರು ಡಿಕ್ಕಿ : ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರಿಗೆ ಗಾಯ

ಬೆಂಗಳೂರು, ಅ.7- ಕಾಲೇಜಿನ ಪ್ರೊಫೆಸರ್ ಚಲಾಯಿಸುತ್ತಿದ್ದ ಕಾರು ಗುದ್ದಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಹಾರಾಣಿ ಕ್ಲಸ್ಟರ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅಶ್ವಿನಿ ಹಾಗೂ ಬಿಎಸ್ಸಿ ಡಾಟಾ ಸೈನ್ಸ್ ವಿದ್ಯಾರ್ಥಿನಿ ನಂದಪ್ರಿಯಾ ಮತ್ತು ಉಪನ್ಯಾಸಕರಾದ ಜ್ಯೋತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಶ್ವಿನಿ ಹಾಗೂ ನಂದಪ್ರಿಯಾ ಮಾಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಜ್ಯೋತಿಯವರು ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಘಾತವೆಸಗಿದ ಪ್ರೊಫೆಸರ್ ನಾಗರಾಜು ಅವರು ಸಹ ಗಾಯಗೊಂಡಿದ್ದಾರೆ.

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ವರಿಷ್ಠರಿಂದ ಇನ್ನೂ ಸಿಕ್ಕಿಲ್ಲ ಅನುಮತಿ

ಇಂದು ಬೆಳಗ್ಗೆ ಇಂಗ್ಲಿಷ್ ಪ್ರೊಫೆಸರ್ ನಾಗರಾಜು ಅವರು ಮನೆಯಿಂದ ಕಾಲೇಜಿಗೆ ತಮ್ಮ ಸ್ವಿಪ್ಟ್ ಕಾರಿನಲ್ಲಿ ಬಂದಿದ್ದು ಕಾಲೇಜು ಒಳಗೆ ಬೆಳಗ್ಗೆ 9.35ರ ಸುಮಾರಿಗೆ ಬರುತ್ತಿದ್ದಂತೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದು ನಂತರ ಉಪನ್ಯಾಸಕರಾದ ಜ್ಯೋತಿ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ.

ಗಾಯಗೊಂಡಿರುವ ವಿದ್ಯಾರ್ಥಿಗಳ ಪೈಕಿ ಅಶ್ವಿನಿ ಅವರಿಗೆ ಗಂಭೀರ ಪೆಟ್ಟಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ಸುದ್ದಿ ತಿಳಿದು ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರೊಫೆಸರ್ ಅವರ ಕಾರು ಅಪಘಾತಕ್ಕೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.

ಸ್ಥಳಕ್ಕೆ ಆರ್‍ಟಿಓ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ ನಂತರ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಲಿದೆ ಎಂದು ಸಂಚಾರ ವಿಭಾಗದ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News