Thursday, May 8, 2025
Homeಇದೀಗ ಬಂದ ಸುದ್ದಿರಿಜಿಸ್ಟಾರ್‌ ಹುದ್ದೆ ಆಮಿಷವೊಡ್ಡಿ ಹಣ ಪಡೆದು ಪ್ರೊಫೆಸರ್‌ಗೆ ಪ್ರಾಣ ಬೆದರಿಕೆ

ರಿಜಿಸ್ಟಾರ್‌ ಹುದ್ದೆ ಆಮಿಷವೊಡ್ಡಿ ಹಣ ಪಡೆದು ಪ್ರೊಫೆಸರ್‌ಗೆ ಪ್ರಾಣ ಬೆದರಿಕೆ

Professor threatened with death

ಬೆಂಗಳೂರು,ಮೇ 8– ರಿಜಿಸ್ಟಾರ್‌ ಹುದ್ದೆ ಕೊಡಿಸುವುದಾಗಿ ಪ್ರೆೊಸರ್‌ರೊಬ್ಬರಿಗೆ ನಂಬಿಸಿ ಹಣ ಪಡೆದು ಹುದ್ದೆಯೂ ಕೊಡಿಸದೆ, ಹಣವು ಹಿಂದಿರುಗಿಸದೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಗೋವಿಂದರಾಜ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನ ಪ್ರೊಪೆಸರ್‌ ಆಗಿದ್ದ ಆರ್‌.ಕೆ.ಸೋಮಶೇಖರ್‌ ಮೋಸಕ್ಕೊಳಗಾದವರು. 2015ರಲ್ಲಿ ಸ್ನೇಹಿತ ಶಶಿಧರ್‌ ಎಂಬುವುದರ ಮೂಲಕ ರವಿಕುಮಾರ್‌ ಎಂಬಾತನ ಪರಿಚಯವಾಗಿದ್ದು, ಅವರ ಬಳಿ ರಿಜಿಸ್ಟಾರ್‌ ಹುದ್ದೆ ಬಗ್ಗೆ ಚರ್ಚೆ ನಡೆಸಿದ್ದರು.

ಆವೇಳೆ ನಿಮಗೆ ರಿಜಿಸ್ಟಾರ್‌ ಹುದ್ದೆ ಕೊಡಿಸುವುದಾಗಿ ಸೋಮಶೇಖರ್‌ ಅವರಿಗೆ ರವಿಕುಮಾರ್‌ ನಂಬಿಸಿದ್ದಾನೆ. ನಂತರದ ದಿನಗಳಲ್ಲಿ 50ಲಕ್ಷ ಹಣ ಕೊಟ್ಟರೆ ರಿಜಿಸ್ಟಾರ್‌ ಹುದ್ದೆ ಸಿಗಲಿದೆ ಎಂದು ಹೇಳಿದ್ದಾನೆ.

ಅಷ್ಟೊಂದು ಹಣ ಹೊಂದಿಸಲು ಕಷ್ಟವಾಗುತ್ತದೆ, 35ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ. ಈ ಹಣವನ್ನು ಹಂತಹಂತವಾಗಿ ಮಹಿಳಾ ಪ್ರಾಂಶುಪಾಲರೊಬ್ಬರ ಮೂಲಕ 15ಲಕ್ಷ, ನಂತರ ಸೋಮಶೇಖರ್‌ ಅವರೇ ಖುದ್ದಾಗಿ 20ಲಕ್ಷ ಹಣ ಕೊಟ್ಟಿದ್ದಾರೆ.

ರವಿಕುಮಾರ್‌ ಒಟ್ಟು 35ಲಕ್ಷ ಹಣ ಪಡೆದು ಸುಮ್ಮನಾಗಿದ್ದಾನೆ. ಹಲವು ಬಾರಿ ಈ ಬಗ್ಗೆ ವಿಚಾರಿಸಿದಾಗಲೂ ಸಧ್ಯದಲ್ಲೇ ರಿಜಿಸ್ಟಾರ್‌ ಹುದ್ದೆ ಸಿಗುತ್ತದೆ ಎಂದು ನಂಬಿಸುತ್ತಲೇ ಕಾಲ ಕಳೆದಿದ್ದಾನೆ. ಅಷ್ಟೊತ್ತಿಗಾಗಲೇ 2019ರಲ್ಲಿ ಸೋಮಶೇಖರ್‌ ಅವರು ನಿವೃತ್ತಿಯಾಗಿದ್ದಾರೆ. ಆದರೂ ಸಹ ರಿಜಿಸ್ಟಾರ್‌ ಹುದ್ದೆ ಲಭಿಸಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ಸೋಮಶೇಖರ್‌ ಅವರು ದೂರವಾಣಿ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಕೇಳಿದಾಗ ರವಿಕುಮಾರ್‌ ನಿಂಽಸಿದ್ದಾನೆ.ಕಳೆದ ಮಾರ್ಚ್‌ 19 ರಂದು ಹಣ ಕೊಡುವುದಾಗಿ ಸೋಮಶೇಖರ್‌ ಅವರಿಗೆ ನಂಬಿಸಿ ವಿಜಯನಗರದ ಇಂದ್ರಪ್ರಸ್ಥ ಹೋಟೆಲ್‌ ಬಳಿ ಬರುವಂತೆ ಹೇಳಿದ್ದಾನೆ.

ಅದರೆಂತೆ ಸೋಮಶೇಖರ್‌ ಅವರು ಹೋಟೆಲ್‌ ಬಳಿ ಹೋದಾಗ ರವಿಕುಮಾರ್‌ ಕಾರಿನೊಳಗೆ ಅವರನ್ನು ಕೂರಿಸಿಕೊಂಡು ಕುತ್ತಿಗೆ ಬಳಿ ಚಾಕು ಹಿಡಿದು ನೀವು ಇನ್ನೊಮ್ಮ ಹಣ ಕೇಳಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾನೆ.ಮುಂದೇನು ಮಾಡುವುದೆಂದು ತಿಳಿಯದೇ ಸೋಮಶೇಖರ್‌ ಅವರು ಇದೀಗ ಗೋವಿಂದರಾಜ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News