Saturday, October 5, 2024
Homeರಾಜ್ಯಗುಜರಾತ್‌ ಗಿಫ್ಟ್ ಸಿಟಿ ಮಾದರಿಯಲ್ಲಿ ಸೆಂಟ್ರಲ್‌ ಬ್ಯುಸಿನೆಸ್‌‍ ಡಿಸ್ಟ್ರಿಕ್ಟ್‌ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಗುಜರಾತ್‌ ಗಿಫ್ಟ್ ಸಿಟಿ ಮಾದರಿಯಲ್ಲಿ ಸೆಂಟ್ರಲ್‌ ಬ್ಯುಸಿನೆಸ್‌‍ ಡಿಸ್ಟ್ರಿಕ್ಟ್‌ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಬೆಂಗಳೂರು, ಜೂ.29- ಅಹಮದಾಬಾದ್‌ ಸಬರಮತಿ ದಂಡೆಯಲ್ಲಿ ಗುಜರಾತ್‌ ಇಂಟರ್‌ ನ್ಯಾಷನಲ್‌ ಫೈನಾನ್ಸ್ ಟೆಕ್‌-ಸಿಟಿ (ಗಿಫ್ಟ್ ಸಿಟಿ) ಮಾದರಿಯಲ್ಲಿ ಸೆಂಟ್ರಲ್‌ ಬ್ಯುಸಿನೆಸ್‌‍ ಡಿಸ್ಟ್ರಿಕ್ಟ್‌ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರನ್ನು ಭೇಟಿ ಮಾಡಿ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ.

ಕರ್ನಾಟಕ ಐಟಿ, ಬಿಟಿ, ಏರೋಸ್ಪೇಸ್‌‍, ಆಟೋಮೋಟಿವ್‌, ಜವಳಿ ಮತ್ತು ಭಾರೀ ಕೈಗಾರಿಕಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ರಾಜ್ಯ ಈ ಕ್ಷೇತ್ರಗಳ ಅಭಿವೃದ್ಧಿಗೆ ಸೂಕ್ತ ಸ್ಥಳವಾಗಿದ್ದು, ಹೂಡಿಕೆಗೆ ಅಗಾಧ ಅವಕಾಶವಿದೆ. ಟೆಕ್‌ ಹಬ್‌ ಮತ್ತು ಸಿಲಿಕಾನ್‌ ವ್ಯಾಲಿ ಆಫ್‌ ಇಂಡಿಯಾ ಎಂದು ಬೆಂಗಳೂರು ಗುರುತಿಸಿಕೊಂಡಿದೆ.

ಬೆಂಗಳೂರು ಸೆಮಿಕಂಡಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್ ಡೊಮೇನ್‌, ಫಿನ್ಟೆಕ್‌ ಸ್ಪೇಸ್‌‍, ಎಂಟಪ್ರೈರ್ಸ್‌ ಟೆಕ್‌, ಇ-ಕಾಮರ್ಸ್‌ ಮತ್ತು ಎಡ್‌-ಟೆಕ್‌ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಗಿಫ್ಟ್ ಸಿಟಿ ನಿರ್ಮಾಣದಿಂದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿದ್ದು, ಹಲವಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಯತೇಚ್ಚವಾಗಿ ವಿದೇಶಿ ಹೂಡಿಕೆಗಳೂ ಬರಲಿವೆ. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

4.5 ಶತಕೋಟಿ ಡಾಲರ್‌ ಮೌಲ್ಯದ ಎಲೆಕ್ಟ್ರಾನಿಕ್‌ ರಫ್ತುಗಳೊಂದಿಗೆ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ, ಶೇ.46ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದ್ದು, ಭಾರತದ ಕೈಗಾರಿಕಾ ಉತ್ಪಾದನೆಗೆ ಶೇ.10ರಷ್ಟು ಕೊಡುಗೆ ನೀಡುತ್ತಿದೆ.

300 ಕ್ಕೂ ಹೆಚ್ಚು ರಫ್ತು-ಆಧಾರಿತ ಉತ್ಪಾದನಾ ಘಟಕಗಳಿಗೆ ನೆಲೆಯಾಗಿದೆ, ಭಾರತದಲ್ಲಿ ಕರ್ನಾಟಕವು ಅತಿದೊಡ್ಡ ಚಿಪ್‌ ವಿನ್ಯಾಸ ಕೇಂದ್ರವನ್ನು ಹೊಂದಿದೆ. 100ಕ್ಕೂ ಹೆಚ್ಚು ಫ್ಯಾಬಲ್ಲೆಸ್‌‍ ಚಿಪ್‌ ವಿನ್ಯಾಸ ಕೇಂದ್ರಗಳನ್ನು ಹೊಂದಿದೆ. ಭಾರತದಲ್ಲಿ ಏರೋಸ್ಪೇಸ್‌‍ ಮತ್ತು ರಕ್ಷಣಾ ಸಾಧನಗಳ ಪ್ರಮುಖ ತಯಾರಕ ಸ್ಥಾನವಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಕೈಗಾರಿಕೆ ಹಾಗೂ ಕಂಪನಿಗಳಿಗೆ ರಾಜ್ಯ ಸರ್ಕಾರ ಭೂಮಿಯ ಮೇಲೆ ಶೇ.25ರಷ್ಟು ಬಂಡವಾಳ ಸಬ್ಸಿಡಿ, ಯಂತ್ರೋಪಕರಣಗಳ ಮೇಲೆ ಶೇ.20ರಷ್ಟು ಬಂಡವಾಳ ಸಬ್ಸಿಡಿ, ಸ್ಟ್ಯಾಂಪ್‌ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು, ಭೂ ಪರಿವರ್ತನೆ ಮತ್ತು ವಿದ್ಯುತ್‌ ಸುಂಕದ ಮರುಪಾವತಿ ಸೇರಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News