Monday, May 6, 2024
Homeರಾಷ್ಟ್ರೀಯಹಡಗು ತಡೆದು ಸಮುದ್ರದಲ್ಲಿ ಪ್ರತಿಭಟನೆ

ಹಡಗು ತಡೆದು ಸಮುದ್ರದಲ್ಲಿ ಪ್ರತಿಭಟನೆ

ಥಾಣೆ, ಡಿ 3 (ಪಿಟಿಐ) ಜವಾಹರಲಾಲ್ ನೆಹರು ಬಂದರು ಯೋಜನೆಗೆ ಭೂಮಿ ನೀಡಿದ ಗ್ರಾಮಸ್ಥರು ಸಮುದ್ರದ ಮಧ್ಯದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ನವಿ ಮುಂಬೈನ ಬಂದರಿನಲ್ಲಿ ಹಡಗುಗಳ ಸಂಚಾರವನ್ನು ತಡೆದಿದ್ದಾರೆ.

ಜೆಎನ್‍ಪಿಟಿಯಲ್ಲಿ ಹಡಗುಗಳ ಸಂಚಾರವನ್ನು ತಡೆದು ಸಮುದ್ರ ಮಧ್ಯದಲ್ಲಿ ಪ್ರತಿಭಟನೆ ನಡೆಸಿದ ಸುಮಾರು 60 ಅಪರಿಚಿತ ಪುರುಷರು ಮತ್ತು ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ನ್ಹವಾ ಶೇವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹನುಮಾನ್ ಕೋಳಿವಾಡದ ಗ್ರಾಮಸ್ಥರು ಒಳಬರುವ ಮತ್ತು ಹೊರಹೋಗುವ ಹಡಗುಗಳಿಗೆ ನಾಲೆಯನ್ನು ತಡೆದು ದೋಣಿಯನ್ನು ಬಳಸಿದರು ಮತ್ತು ಹಡಗು ಮಾರ್ಗಗಳಿಗೆ ಅಡ್ಡಿಪಡಿಸಿದರು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು.

ನಾಲ್ಕಂತಸ್ತಿನ ಕಟ್ಟಡಕ್ಕೆ ಬೆಂಕಿ, ಇಬ್ಬರ ಸಜೀವ ದಹನ, ಮೂವರ ರಕ್ಷಣೆ

ಹನುಮಾನ ಕೋಳಿವಾಡ ಗ್ರಾಮದ ಸರಪಂಚ ಪರಮಾನಂದ ಕೋಳಿ ಮಾತನಾಡಿ, ಬಂದರು ಯೋಜನೆಗೆ ಭೂಸ್ವಾೀಧಿನಪಡಿಸಿಕೊಂಡಿರುವ ಜನರು ಕಳೆದ 38 ವರ್ಷಗಳಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದು, ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

RELATED ARTICLES

Latest News