Thursday, December 19, 2024
Homeರಾಷ್ಟ್ರೀಯ | Nationalಸಂಸತ್ ಪ್ರವೇಶದ್ವಾರದಲ್ಲಿ ಹೈಡ್ರಾಮಾ, ತಳ್ಳಾಟ-ನೂಕಾಟ : ಬಿಜೆಪಿ ಸಂಸದನಿಗೆ ಗಾಯ

ಸಂಸತ್ ಪ್ರವೇಶದ್ವಾರದಲ್ಲಿ ಹೈಡ್ರಾಮಾ, ತಳ್ಳಾಟ-ನೂಕಾಟ : ಬಿಜೆಪಿ ಸಂಸದನಿಗೆ ಗಾಯ

Protests At Parliament Turn Into Injury vs Injury Claims By BJP, Congress

ನವದೆಹಲಿ,ಡಿ.19- ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ವಿಷಯವಾಗಿ ನೀಡಿರುವ ವಿವಾದಿತ ಹೇಳಿಕೆ ಸಂಸತ್ನಲ್ಲೂ ಕೋಲಾಹಲ ಮೂಡಿಸಿದ್ದಲ್ಲದೆ ಸಂಸತ್ ಹೊರಗೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ತಳ್ಳಾಟ, ನೂಕಾಟ ಉಂಟಾಗಿ ಬಿಜೆಪಿ ಸಂಸದರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಸಂಗ ನಡೆದಿದೆ.

ಅಮಿತ್ ಶಾ ತಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ರಾಜಕೀಯ ಕೂಟದ ಸಂಸದರು ಸಂಸತ್ನ ಮಕರ್ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದರೂ ಕೂಡ ಪ್ರತಿಭಟನೆ ನಡೆಸುತ್ತಾ ಸಂಸತ್ ದ್ವಾರದ ಬಳಿ ಬಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮುಖಾಮುಖಿಯಾಗಿದ್ದಾರೆ.

ತಳ್ಳಾಟ, ನೂಕಾಟದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕೆಳಗೆ ಬಿದ್ದಿದ್ದು, ಅವರ ಹಣೆಗೆ ಗಾಯವಾಗಿ ರಕ್ತ ಸೋರಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ, ರಾಹುಲ್ಗಾಂಧಿ ತಳ್ಳಿದ್ದರಿಂದಾಗಿ ಪ್ರತಾಪ್ ಸಾರಂಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತ ಬಿಜೆಪಿ ಸಂಸದರು ತಮಗೆ ಸಂಸತ್ ಪ್ರವೇಶಿಸಲು ಅಡ್ಡಿಪಡಿಸಿ ನೂಕಿದ್ದಾರೆ ಎಂದು ರಾಹುಲ್ಗಾಂಧಿ ಪ್ರತ್ಯಾರೋಪ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆ ಹಿನ್ನೆಲೆಯಲ್ಲಿ ಸಂಸತ್ನ ಉಭಯ ಸದನಗಳಲ್ಲೂ ಕೋಲಾಹಲ ವಾತಾವರಣ ನಿರ್ಮಾಣವಾಗಿದ್ದು, ಕಲಾಪ ನಡೆಯದೆ ಮುಂದೂಡಿಕೆಯಾಗಿದೆ.

ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ ಹಾಗೂ ಇತರೆ ಪಕ್ಷಗಳ ಸಂಸದರು ನೀಲಿ ದಿರಿಸಿನಲ್ಲಿ ಸಂಸತ್ಗೆ ಆಗಮಿಸುವ ಮೂಲಕ ತಮ ಆಕ್ರೋಶ ಹೊರಹಾಕಿದ್ದಾರೆ.ಜೈ ಭೀಮ್, ಮೇ ಬಿ ಅಂಬೇಡ್ಕರ್, ಅಮಿತ್ ಶಾ ಮಾಫಿ ಮಾಂಗೋ ಎಂಬ ಘೋಷಣೆಗಳು ಮಾರ್ಧ್ವನಿಸಿದವು.

ಪ್ರತಿಭಟನೆ ತಡೆಯುವ ಯತ್ನ :
ಬಿಜೆಪಿ ಸಂಸದರು ತಮನ್ನು ತಮನ್ನು ತಳ್ಳಿದ್ದು, ಸಂಸತ್ ಪ್ರವೇಶಿಸದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ಇತರ ವಿರೋಧ ಪಕ್ಷದ ಸಂಸದರಿಗೂ ಅಡ್ಡಿ ಪಡಿಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಕೆಲವು ಬಿಜೆಪಿ ಸಂಸದರು ರಾಹುಲ್ ಗಾಂಧಿಯವರು ತಳ್ಳಿದರು, ಇದರಿಂದ ಉಂಟಾದ ತಳ್ಳಾಟ ನೂಕಾಟದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಗಾಯಗೊಂಡರು ಎಂಬ ಟೀಕೆಗಳ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. ಬಿಜೆಪಿ ಸಂಸದರು ನನ್ನನ್ನು ತಡೆದರು, ನನ್ನನ್ನು ತಳ್ಳಿದರು ಮತ್ತು ಬೆದರಿಕೆ ಹಾಕಿದರು ಎಂದು ಆರೋಪಿಸಿದರು.

ಸಂಸತ್ತಿನ ಆವರಣದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವೈನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರನ್ನೂ ತಳ್ಳಲಾಗಿದೆ. ಇದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ಸಂಸತ್ ಒಳಗೆ ಹೋಗಲು ನಮಗೆ ಹಕ್ಕಿದೆ. ಬಿಜೆಪಿ ಸದಸ್ಯರು ನಮನ್ನು ಒಳಗೆ ಹೋಗದಂತೆ ತಡೆಯಲೆತ್ತಿಸಿದ್ದಾರೆ. ಬಾಗಿಲಿಗೆ ಅಡ್ಡ ನಿಂತು ವಿರೋಧ ವ್ಯಕ್ತ ಪಡಿಸಿದ್ದಾರೆ. ಇದು ಸಂವಿಧಾನದ ಮೇಲೆ ದಾಳಿಯಾಗಿದೆ ಎಂದು ಅವರು ಟೀಕಿಸಿದರು.

ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರಾದ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಕೂಟದ ಹಲವಾರು ಸಂಸದರು ಬುಧವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಸಂಸತ್ತಿನ ಮಕರ ದ್ವಾರದ ಮುಂದೆ ಬಿಜೆಪಿ ಸಂಸದರೊಂದಿಗೆ ಪ್ರತಿಭಟನಾ ನಿರತ ಇಂಡಿಯಾ ಕೂಟದ ಸಂಸದರು ಮುಖಾಮುಖಿಯಾದರು. ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರು ಪರಸ್ಪರ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಸಂಸತ್ನ ಮೆಟ್ಟಿಲುಗಳತ್ತ ಸಾಗುತ್ತಿದ್ದಂತೆ ಗಲಿಬಿಲಿಯ ವಾತಾವರಣ ನಿರ್ಮಾಣವಾಯಿತು.

RELATED ARTICLES

Latest News