Wednesday, December 4, 2024
Homeಬೆಂಗಳೂರುಬಿಬಿಎಂಪಿ ವಾರ್ಡ್‍ಗಳ ಹೆಸರು ಬದಲಾವಣೆಗೆ ಸಾರ್ವಜನಿಕರ ಆಕ್ರೋಶ

ಬಿಬಿಎಂಪಿ ವಾರ್ಡ್‍ಗಳ ಹೆಸರು ಬದಲಾವಣೆಗೆ ಸಾರ್ವಜನಿಕರ ಆಕ್ರೋಶ

ಬೆಂಗಳೂರು,ಅ.22- ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್‍ಗಳ ಹೆಸರು ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ 198ನೇ ವಾರ್ಡ್ ಬಸವನಗುಡಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿಯ ನಿವಾಸಿಗಳು 130 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಹೆಸರಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ.

ಕಡಲೆಕಾಯಿ ಪರಷೆ ನಡೆಯುವುದು ದೊಡ್ಡ ಬಸವನಗುಡಿಯ ಹೆಸರಿನಲ್ಲೇ , ನಂತರದ್ದು ದೊಡ್ಡ ಗಣಪತಿ ದೇವಸ್ಥಾನದ ಹೆಸರು ಬರಬಹುದು.ಅಷ್ಟಕ್ಕೂ ವಾರ್ಡ್ ಹೆಸರು ಹೀಗೆ ಬದಲಾಯಿಸುವುದರಿಂದ ಸರ್ಕಾರಕ್ಕೆ ಇರುವ ಲಾಭವಾದರೂ ಏನು? ಮತ್ತು ಇದೇ ಹೆಸರು ಮುಂದುವರೆದರೆ ನಷ್ಟವೇನು? ಎಂಬುದು ಬಸವನಗುಡಿ ನಿವಾಸಿಗಳ ಪ್ರಶ್ನೆಯಾಗಿದೆ.

ಸರ್ಕಾರಕ್ಕೆ ಇಂಥ ಸಂರ್ಭದಲ್ಲಿ ಮತದಾರರು ಮುಖ್ಯವಲ್ಲ ಎಂದು ಭಾವಿಸಿದಂತಿದೆ. ಬಸವನಗುಡಿಯಲ್ಲಿ ಎಂತೆಂಥ ಮಹನೀಯರು, ಸಾಹಿತಿಗಳು, ಕವಿಗಳು, ಬುದ್ಧಿಜೀವಿಗಳು ಇದ್ದಾರೆ. ಇಂಥ ಹಿರಿಯರು ಹಾಗೂ ಇಲ್ಲಿನ ಜನಸಾಮಾನ್ಯರ ಅರಿವಿಗೆ ಬಾರದಂತೆ ಈ ಕೆಲಸ ಮಾಡಿದ್ದಾರೆ.

ಪ್ಯಾಲೆಸ್ತೇನಿಯರಿಗೆ ಸಹಾಯಹಸ್ತ ಚಾಚಿದ ಭಾರತ, ಅಗತ್ಯ ವಸ್ತುಗಳ ರವಾನೆ

ಯಾವುದೆ ಬದಲಾವಣೆ, ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಹಿರಿಯರು, ಅನುಭವಿಗಳನ್ನು ಸಂಪರ್ಕಿಸಿದರೆ ತಪ್ಪೇನು? ಅಂದರೆ ಯಾರಿಗೂ ತಿಳಿಯದೆ ವಾಮ ಮಾರ್ಗದಲ್ಲಿ, ಅಂದರೆ ಕಳ್ಳದಾರಿಯಲ್ಲಿ ವಾರ್ಡ್ ಹೆಸರು ಬದಲಿಸುವ ಜರೂರತ್ತು ಏನಿದೆ? ಈ ಬದಲಾವಣೆ ಬಗ್ಗೆ ಬಿಬಿಎಂಪಿ ಆಯುಕ್ತರು, ಸ್ಥಳೀಯ ಎಂಎಲ್‍ಎ, ಮಾಜಿ ಕಾರ್ಪೊರೇಟರ್ ಗಳಿಗೂ ಮಾಹಿತಿ ಇಲ್ಲ.

ಇದರ ಜೊತೆಗೆ ಗಿರಿನಗರವನ್ನು ಸ್ವಾಮಿ ವಿವೇಕಾನಂದ ಅಂತ, ಹನುವಂತನಗರವನ್ನು ಗವಿ ಗಂಗಾಧರೇಶ್ವರ ಎಂದೂ ಬದಲಾಯಿಸುತ್ತಿದ್ದಾರಂತೆ. ಇದು ಹೀಗೇ ಮುಂದುವರೆದರೆ, ನಾಳೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹೆಸರನ್ನೂ ಇವರು ಬದಲಿಸಲು ಮುಂದಾಗಬಹುದೇನೋ? ಹಾಗೆಯೇ ಮುಂದುವರೆದು ಬೆಂಗಳೂರು ಹೆಸರನ್ನು ಬದಲಿಸಿದರೂ ಆಶ್ವರ್ಯವಿಲ್ಲ ಎಂದು ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಅಧ್ಯಕ್ಷ ಕೆಎನ್‍ಸಿ ಸುರೇಶ್ ಪ್ರಶ್ನಿಸಿದ್ದಾರೆ.

RELATED ARTICLES

Latest News