ದೊಡ್ಡಬಳ್ಳಾಪುರ, ಮೇ.12- ತಾಲ್ಲೂಕಿನ ನಾಗಸಂದ್ರದ ಬಸವರಾಜು ಅವರ ತೋಟದ ಮನೆ ಬಳಿ ಅಪರೂಪದ ಕಪ್ಪು ಬಣ್ಣದ ಪುನುಗು ಬೆಕ್ಕು ಪತ್ತೆಯಾಗಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಜಾತಿಯ ಬೆಕ್ಕು ಕಂಡುಬಂದಿದೆ.
ಇದು ಮಲೆನಾಡು, ತಿರುಪತಿ ಭಾಗದಲ್ಲಿ ಕಂಡು ಬರುವ ಈ ಪುನುಗು ಬೆಕ್ಕುಗಳ ಹೋಲಿಕೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಅಂದರೆ ಕಣ್ಣು, ಕಿವಿ, ಮೂಗಿನ ಆಕಾರದಲ್ಲಿ ಮತ್ತು
ಬಣ್ಣದಲ್ಲೂ ಸಹ ಸ್ವಲ್ಪ ಮಟ್ಟಿಗೆ ವ್ಯತ್ಯಾಸಗಳಿರುತ್ತವೆ ಎಂದು ದೊಡ್ಡಬಳ್ಳಾಪುರ ಕೃಷ್ಣಗೌಡ ತಿಳಿಸಿದ್ದಾರೆ.
ರಾತ್ರಿ ವೇಳೆ ದಾರಿ ತಪ್ಪಿ ಬಂದು ಮನೆ ಸಮೀಪದಲ್ಲಿನ ವಿದ್ಯುತ್ ದೀಪದ ಬೆಳಕು ಇರುವ ಕಡೆ ಬಂದು ಭಯದಿಂದ ಅವಿತು ಕೊಂಡಿತ್ತು. ಬೀದಿ ನಾಯಿಗಳ ಪಾಲಾಗದಂತೆ ಸ್ಥಳೀಯರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.