Friday, April 4, 2025
Homeಬೆಂಗಳೂರುನೇರಳೆ ಮಾರ್ಗದ ಮೆಟ್ರೋ ಸಂಚಾರ ಯಥಾಸ್ಥಿತಿಗೆ

ನೇರಳೆ ಮಾರ್ಗದ ಮೆಟ್ರೋ ಸಂಚಾರ ಯಥಾಸ್ಥಿತಿಗೆ

ಬೆಂಗಳೂರು,ಜೂ.13- ತಾಂತ್ರಿಕ ದೋಷದಿಂದ ಇಂದು ಬೆಳಗ್ಗೆ 10 ಗಂಟೆಯಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ನೇರಳೆ ಮಾರ್ಗದ ಮೆಟೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಟ್ರಿನಿಟಿ ಮೆಟೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ತಾಂತ್ರಿಕ ಸಮಸ್ಯೆಯನ್ನು ಬಿಎಂಆರ್‌ಸಿಎಲ್‌ ತ್ವರಿತವಾಗಿ ದುರಸ್ಥಿಗೊಳಿಸಿದೆ. ಏಕಾಏಕಿ ರೈಲು ಓಡಾಟ ಸ್ಥಗಿತಗೊಂಡು ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.

ಮತ್ತೆ ಕಳೆದ ಒಂದು ಗಂಟೆಯಿಂದ ರೈಲು ಓಡಾಡುತ್ತಿದೆ. ಪ್ರಯಾಣಿಕರ ಸಾಂಧ್ರತೆ ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್‌‍ ರಾಜಗೋಪಾಲ್‌ ತಿಳಿಸಿದ್ದಾರೆ.

ಸಮಸ್ಯೆ ಕಂಡುಬಂದ ನಂತರ ದೋಷಯುಕ್ತ ರೈಲನ್ನು ಪಾಕೆಟ್‌ ಟ್ರ್ಯಾಕ್‌ಗೆ ಕೊಂಡೊಯ್ಯಲಾಯಿತು. ನಂತರ ರೈಲು ಸೇವೆ ಎಂದಿನಂತೆ ಆರಂಭಿಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಸೇವೆ ನಡೆಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳಬಹುದು. ಉಂಟಾದ ಅನಾನುಕೂಲತೆಗಾಗಿ ಸಂಸ್ಧೆ ವಿಷಾದಿಸಿದೆ.

RELATED ARTICLES

Latest News