Thursday, December 12, 2024
Homeಅಂತಾರಾಷ್ಟ್ರೀಯ | Internationalಟ್ರಂಪ್‌ ಜೀವಕ್ಕೆ ಅಪಾಯವಿದೆ ; ಆತಂಕ ವ್ಯಕ್ತಪಡಿಸಿದ ಪುಟಿನ್‌

ಟ್ರಂಪ್‌ ಜೀವಕ್ಕೆ ಅಪಾಯವಿದೆ ; ಆತಂಕ ವ್ಯಕ್ತಪಡಿಸಿದ ಪುಟಿನ್‌

Putin calls Trump 'intelligent', but warns US President-elect may not be safe

ಮಾಸ್ಕೋ,ನ.29- ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌‍ ಟ್ರಂಪ್‌ ಅವರ ಜೀವಕ್ಕೆ ಅಪಾಯವಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಂಪ್‌ ಅವರೊಬ್ಬ ಅನುಭವಿ ಮತ್ತು ಬುದ್ದಿವಂತ ರಾಜಕಾರಣಿ ಎಂದು ಹೊಗಳಿರುವ ಪುಟಿನ್‌ ಅವರು ಟ್ರಂಪ್‌ ಇನ್ನು ಸುರಕ್ಷಿತವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ, ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್‌ ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆದಿತ್ತು. ಅದರಲ್ಲಿ ಅವರು ಗಾಯಗೊಂಡಿದ್ದರು. ಇದರ ನಂತರ, ಸೆಪ್ಟೆಂಬರ್‌ನಲ್ಲಿ, ಟ್ರಂಪ್‌ ಅವರ ಫ್ರೋರಿಡಾ ಗಾಲ್ಫ್‌‍ ಕೋರ್ಸ್‌ನಲ್ಲಿ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು.

ಅಮೆರಿಕ ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ ವಿರುದ್ಧ ಹತ್ಯೆ ಯತ್ನ ನಡೆದಿದೆ ಎಂದು ಕಜಕಿಸ್ತಾನ್‌ ಶಂಗಸಭೆಯ ಬಳಿಕ ರಷ್ಯಾ ಅಧ್ಯಕ್ಷ ಪುಟಿನ್‌ ಹೇಳಿದ್ದಾರೆ. ಟ್ರಂಪ್‌ ಇನ್ನೂ ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ಟ್ರಂಪ್‌ ಜಾಗರೂಕರಾಗಿರುತ್ತಾರೆ ಎಂದು ಪುಟಿನ್‌ ಭರವಸೆ ವ್ಯಕ್ತಪಡಿಸಿದರು. ಇದಲ್ಲದೆ, ಟ್ರಂಪ್‌ ಅವರ ಕುಟುಂಬ ಮತ್ತು ಮಕ್ಕಳ ಟೀಕೆಗೆ ಪುಟಿನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ರಷ್ಯಾದಲ್ಲಿ ಅಂತಹ ನಡವಳಿಕೆ ಎಂದಿಗೂ ನಡೆಯುವುದಿಲ್ಲ ಎಂದು ಹೇಳಿದರು.

ಯುಎಸ್‌‍ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್‌‍ ಟ್ರಂಪ್‌ ನವೆಂಬರ್‌ 7 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತನಾಡಿದ್ದರು. ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ, ಸಂಘರ್ಷವನ್ನು ಉಲ್ಬಣಗೊಳಿಸುವುದನ್ನು ತಪ್ಪಿಸಲು ಟ್ರಂಪ್‌ ಪುಟಿನ್‌ ಅವರನ್ನು ಒತ್ತಾಯಿಸಿದ್ದಾರೆ.

ರಷ್ಯಾದ ಸೋಚಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಯುಎಸ್‌‍-ರಷ್ಯಾ ಸಂಬಂಧಗಳನ್ನು ಸುಧಾರಿಸುವ ಬಯಕೆಯ ಬಗ್ಗೆ ಗಮನ ಹರಿಸಬೇಕು ಎಂದು ಪುಟಿನ್‌ ಪ್ರತಿಪಾದಿಸಿದ್ದರು. ಟ್ರಂಪ್‌ ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

RELATED ARTICLES

Latest News