Thursday, December 5, 2024
Homeಕ್ರೀಡಾ ಸುದ್ದಿ | Sportsಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು ಪ್ರವೇಶ

ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು ಪ್ರವೇಶ

PV Sindhu advances to pre-quarterfinals at Kumamoto Masters Japan 2024

ಚೀನಾ, ನ.20- ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಇಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್ 2024ರ ಪ್ರಿ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಥೈಲ್ಲಾಂಡ್ನ ಒಂಗ್ಬಮ್ರುಂ ಗ್ಫಾನ್ ವಿರುದ್ಧ 21-17, 21- 19 ನೇರ ಸೆಟ್ಗಳ ಮೂಲಕ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದು, ಇದು ಸಿಂಧು ಅವರು ಒಂಗ್ಬಮ್ರುಂಗ್ಭಾನ್ ವಿರುದ್ಧ ಪಡೆದಿರುವ 20ನೇ ಗೆಲುವಾಗಿದೆ.

ಪಂದ್ಯದ ಮೊದಲ ಸುತ್ತಿನ ಆರಂಭದಲ್ಲಿ 10-14 ರಿಂದ ಹಿನ್ನೆಡೆ ಅನುಭವಿಸಿ ಸೆಟ್ ಸೋಲುವ ಭೀತಿ ಉಂಟಾಗಿತ್ತಾದರೂ ನಂತರ ತಮ ಅದ್ಭುತ ಸರ್ವ್ಗಳ ಮೂಲಕ ಥೈಲ್ಲಾಂಡ್ ಆಟಗಾರ್ತಿಯನ್ನು ತಬ್ಬಿಬ್ಬುಗೊಳಿಸಿದ ಸಿಂಧು, ಅಂತಿಮವಾಗಿ 21-17 ಅಂತರ ದಿಂದ ಸೆಟ್ ಜಯಿಸಿದರು.

ದ್ವಿತೀಯ ಸೆಟ್ನ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದ ಸಿಂಧು 6-10, 9-13 ಅಂಕಗಳೊಂದಿಗೆ ಮೇಲುಗೈ ಸಾಧಿಸಿ ಅಂತಿಮವಾಗಿ 21-19 ರಿಂದ ನೇರ ಸೆಟಗಳ ಮೂಲಕ ಪಂದ್ಯ ಗೆದ್ದು ಪ್ರಿ- ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಈ ಮೂಲಕ ಒಂಗ್ಬಮ್ರುಂಗ್ಭಾನ್ ವಿರುದ್ಧ ಎರಡು ಬಾರಿ ಸತತ 10 ಪಂದ್ಯಗಳನ್ನು ಜಯಿಸಿದ ದಾಖಲೆಗೆ ಸಿಂಧು ಪಾತ್ರರಾಗಿದ್ದಾರೆ.

RELATED ARTICLES

Latest News