Sunday, April 28, 2024
Homeರಾಜ್ಯಪಿಎಸ್‍ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‍ಪಿನ್‍ಗಳು ಸಂಪುಟದಲ್ಲಿದ್ದಾರೋ…?

ಪಿಎಸ್‍ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‍ಪಿನ್‍ಗಳು ಸಂಪುಟದಲ್ಲಿದ್ದಾರೋ…?

ಬೆಂಗಳೂರು,ಜ.20- ಪಿಎಸ್‍ಐ ಮತ್ತು ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಕಿಂಗ್‍ಪಿನ್‍ಗಳು ಸಚಿವ ಸಂಪುಟದಲಿದ್ದಾರೋ ಅಥವಾ ಹೊರಗಡೆ ಇದ್ದಾರೋ ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ನಡೆಯುವ ಮೊದಲೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ ಎಂದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರ ಜಗತ್ತಿಗೆ ಗೊತ್ತಾಗಬೇಕು. ಅವರಿಗೆ ರಕ್ಷಣೆ ಯಾರು ಕೊಡುತ್ತಾರೆ, ಇದರ ಹಿಂದಿನ ಪ್ರಭಾವಿ ಶಕ್ತಿಗಳು ಯಾವುವು. ಇದನ್ನು ಬುಡಸಮೇತ ಕಿತ್ತು ಹಾಕಬೇಕೆಂದು ಆಗ್ರಹಿಸಿದರು.

ಪ್ರಾಣ ಪ್ರತಿಷ್ಠೆವರೆಗೆ ರಾಮಲಲ್ಲಾನ ಕಣ್ಣು ಅಗೋಚರವಾಗಿರಲಿದೆ

ಈ ಹಿಂದೆ ಇಂಥದ್ದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಲಾಗಿತ್ತು. ಆದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ಗಂಭೀರ ವಿಚಾರ. ಹೀಗಾಗಿ ಹೊರ ಜಗತ್ತಿಗೆ ಇದರ ಕಿಂಗ್‍ಪಿನ್‍ಗಳು ಯಾರೆಂಬುದು ಗೊತ್ತಾಗಬೇಕು. ರಾಜಾಶ್ರಯದ ಕೃಪಕಟಾಕ್ಷದ ಮೂಲಕ ಪ್ರಕರಣ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.

ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಹಾಜರಾಗುವ ತೀರ್ಮಾನದ ವಿರುದ್ಧ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ. ಇದನ್ನು ತಾನು ಸ್ವಾಗತಿಸುತ್ತೇನೆ ಎಂದರು. ರಾವಣನ ಸಹೋದರ ವಿಭಿಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್‍ನಲ್ಲಿ ರಾಮನ ಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನ ನೀಡಿದ್ದಾರೆ. ಹೀಗಾಗಿ ವಿಭಿಷಣ ಮನಸ್ಥಿತಿಯ ಕಾಂಗ್ರೆಸ್‍ನವರು ಪಕ್ಷ ತೊರೆದು ಬರುವುದು ಒಳಿತು ಎಂದು ಸಲಹೆ ಮಾಡಿದರು.

ರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಜ. 22 ರಂದು ಸರ್ಕಾರಿ ರಜೆ ವಿಷಯದ ಕುರಿತು ಇಷ್ಟು ದಿನ ಮೀನಾಮೇಷ ಎಣಿಸಿದ್ದೆ ತಪ್ಪು, ರಜೆಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಸ್ವಯಂ ಪ್ರೇರಿತವಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಗೋದ್ರಾ ರೀತಿಯ ಘಟನೆಯ ಬಗ್ಗೆ ಹರಿಪ್ರಸಾದ್ ಹೇಳಿದ್ದರ ಬಗ್ಗೆ ಪೋಲಿಸರ ಬಳಿ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ, ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಮಾಹಿತಿ ನೀಡಬೇಕು ಎಂದು ಒತ್ತಡ ಹಾಕಿದರು.

ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಮಾಡಲು ಕೇಂದ್ರ ಸರ್ಕಾರದ ಒತ್ತಡ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಸಿ.ಟಿ.ರವಿ, ರಾಜ್ಯಪಾಲರು ಹರಿಪ್ರಸಾದ್‍ಗೆ ಹೇಳಿ ಹೇಳಿಕೆ ಕೊಡಿಸಿದ್ದರಾ? ಅಥವ ಎಐಸಿಸಿ ಪ್ರಚೋದನೇನಾ…? ಎಂದು ಪ್ರಶ್ನಿಸಿದರು. ಖರ್ಗೆ ಅವರು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಆಗಿದ್ದರು.

ಪಿಎಸ್‍ಐ ನೇಮಕಾತಿ ಪರೀಕ್ಷೆಗೆ ಕಟ್ಟೆಚ್ಚರ : ಪರಮೇಶ್ವರ್

ಪರಿಷತ್ ವಿಪಕ್ಷ ನಾಯಕರಾಗಿದ್ದರು. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು, ಹಾದಿಬೀದಿಯಲ್ಲಿ ಹೋಗುವವರಲ್ಲ. ಅಂಥವರು ಹೇಳಿಕೆ ನೀಡಿದ್ದಾರೆ, ಅವರು ಯಾರ ಸಂಪರ್ಕದಿಂದ ಹೇಳಿಕೆ ನೀಡಿದ್ದಾರೆ. ಜೈಷೇ ಮಹಮದ್ ಸಂಪರ್ಕನಾ..? ತಾಲಿಬಾನ್ ಸಂಪರ್ಕನಾ? ದಾವೂದ್ ಇಬ್ರಾಹಿಂ ಸಂಪರ್ಕನಾ..? ಯಾರ ಸಂಪರ್ಕದಿಂದ ಹೇಳಿದರು ಎಂದು ಪ್ರಶ್ನಿಸಿದರು.

RELATED ARTICLES

Latest News