Tuesday, September 16, 2025
Homeರಾಜಕೀಯ | Politicsಕಾಂಗ್ರೆಸ್‌‍ ಸರ್ಕಾರ ಒಂದು ವರ್ಷ ಪೂರೈಸಿದ ಕುರಿತು ಆರ್‌.ಅಶೋಕ್‌ ವ್ಯಂಗ್ಯ

ಕಾಂಗ್ರೆಸ್‌‍ ಸರ್ಕಾರ ಒಂದು ವರ್ಷ ಪೂರೈಸಿದ ಕುರಿತು ಆರ್‌.ಅಶೋಕ್‌ ವ್ಯಂಗ್ಯ

ಬೆಂಗಳೂರು,ಮೇ20-ನಾಲಾಯಕ್‌ ಸಚಿವರು ಹಾಗೂ ಸಾಲು ಸಾಲು ಎಡವಟ್ಟುಗಳು ಮತ್ತು ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಸ್‌‍ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಕಾಂಗ್ರೆಸ್‌‍ ಸರ್ಕಾರ ಒಂದು ವರ್ಷ ಪೂರ್ಣಗೊಳ್ಳುತ್ತಿರುವುದರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಎಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಾಲಾಯಕ್‌ ಸಚಿವರು ಸಾಲು ಸಾಲು ಎಡವಟ್ಟುಗಳು ಸಿಎಂ ಕುರ್ಚಿಗೇರಲು ಡಿಸಿಎಂ ಕನಸು, ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸುಎಂದು ಅಪಹಾಸ್ಯ ಮಾಡಿದ್ದಾರೆ.

ಜಾತಿಗೊಂದು, ಜಿಲ್ಲೆಗೊಂದು ಬಣ ನಾಡಿನ ಅಭಿವೃದ್ದಿ ಮಾತ್ರ ಗೌಣ ಇದು ಕಾಂಗ್ರೆಸ್‌‍ ಸರ್ಕಾರದ ಒಂದು ವರ್ಷದ ಕಥೆ ಏಳೂವರೆ ಕೋಟಿ ಕನ್ನಡಿಗರ ದಿನನಿತ್ಯದ ವ್ಯಥೆ ಎಂದು ಲೇವಡಿ ಮಾಡಿದ್ದಾರೆ.

ಕುಸಿದ ಕಾನೂನು ಸುವ್ಯವಸ್ಥೆ ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ ಏರುತ್ತಲೇ ಇದೆ ಸಾಲದ ಹೊರೆ ಅಭಿವೃದ್ಧಿ ಮಾತ್ರ ಕಣರೆ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

Latest News