ಬೆಂಗಳೂರು,ನ.29- ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಮಾತ್ರವಲ್ಲದೆ ಆಪ್ತ ಸಹಾಯಕರು(ಪಿಎ) ಕೂಡ ಮುಕ್ತವಾಗಿ ದಂಧೆಗಿಳಿದಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಈಗ ಶಾಸಕ ಬಿ.ಆರ್.ಪಾಟೀಲ್ ಪತ್ರದಿಂದ ಮತ್ತೊಮ್ಮೆ ಇದು ಸಾಬೀತಾಗಿದೆ ಎಂದು ಆರೋಪಿಸಿದರು.
ಸಚಿವರು ಮಾತ್ರವಲ್ಲದೆ ಅವರ ಪಿಎಗಳು ಕೂಡ ಬಹಿರಂಗವಾಗಿಯೇ ವಸೂಲಿಗೆ ಇಳಿದಿದ್ದಾರೆ. ಧೈರ್ಯ ಇರುವ ಶಾಸಕರು ಮಾತ್ರ ಇದನ್ನು ಹೇಳುತ್ತಾರೆ. ಎರಡನೇ ಬಾರಿ ಬಿ.ಆರ್.ಪಾಟೀಲ್ ಪತ್ರ ಬರೆದಿದ್ದಾರೆ. ಅನುದಾನ ಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಬಳಿಕ ಲೆಟರ್ ಬೋಗಸ್ ಅಂದರೂ ನನ್ನ ಕಳ್ಳನ್ನ ಮಾಡಿದ್ದಾರೆ. ನಾನು ಸದನಕ್ಕೆ ಬರುವುದಿಲ್ಲ ಎಂದಿದ್ದಾರೆ.
ಬಿ.ಆರ್.ಪಾಟೀಲ್ ಧೈರ್ಯ ತೋರಿಸಿದ್ದಾರೆ. ಕಳಪೆ ಕಾಮಗಾರಿ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಉಳಿದವರು ಹೆದರಿ ಕುಳಿತಿದ್ದಾರೆ. ಮಂತ್ರಿಗಳು ಹೆದರಿಸುತ್ತಿದ್ದಾರೆ ಎಂದು ಟೀಕಿಸಿದರು. ನೆಮ್ಮದಿಯ ಸರ್ಕಾರ ಅನ್ನುತ್ತಾರೆ. ನೆಮ್ಮದಿ ಕಳೆದುಕೊಂಡು ಕೂತಿದ್ದಾರೆ. ನಮ್ಮ ಅವಯ ದುಡ್ಡು ತಗೊಂಡಿದ್ದಾರೆ. ರಾಜ್ಯದ ಯೋಜನೆಗಳು ರಾಜ್ಯದ ಜನತೆಗೆ ಗೊತ್ತಾಗಬೇಕು. ಆದರೆ ಹೊರಗಡೆ ತೆಗೆದುಕೊಂಡು ಹೋಗಿ ತೆಲಂಗಾಣದಲ್ಲಿ ಜಾಹೀರಾತು ನೀಡಿದ್ದಾರೆ ಎಂದು ದೂರಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಪ್ರಕರಣ, ಪೊಲೀಸರ ವಿರುದ್ಧ ಯತ್ನಾಳ್ ಆಕ್ರೋಶ
ಅಲ್ಲಿನ ಕಾಂಗ್ರೆಸ್ ಜಾಹೀರಾತು ನೀಡಲಾಗಲ್ಲ. ನಮ್ಮ ಜನರ ತೆರಿಗೆ ಹಣವನ್ನು ಅಲ್ಲಿ ಖರ್ಚು ಮಾಡುತ್ತಿದ್ದಾರೆ. ಕೋಟ್ಯಾಂತರ ಜಾಹೀರಾತು ಹೊರ ರಾಜ್ಯದಲ್ಲಿ ಖರ್ಚು ಮಾಡುತ್ತಿರುವುದಲ್ಲದೆ ಅನ್ ಅಫಿಶಿಯಲ್ ಜಾಹೀರಾತು ಕಂಪನಿಗೆ ಹಣ ಕೊಟ್ಟು ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತರು ಸಂಕಷ್ಟದಲ್ಲಿದ್ದಾರೆ. ಬರದ ಹಣ, ಬರ ಪರಿಹಾರ ಕೊಟ್ಟಿಲ್ಲ. ಪಿಡಿ ಹಣವನ್ನ ಕುಡಿಯುವ ನೀರಿಗೆ ಕೊಡಬೇಕು. ಅದು ಬಿಟ್ಟು ಬೇರೆಯದಕ್ಕೆ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಒಡೆದ ಮನೆಯಾಗಿದೆ. ಯಾವಾಗ ಬೆಂಕಿ ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಇವರು ಹೇಗಾದ್ರೂ ಕಿತ್ತಾಡಲಿ. ನಮಗೆ ರಾಜ್ಯದ ಜನರ ಹಿತಕ್ಕೆ ಮುಖ್ಯ. ರಾಜೀನಾಮೆ ಎಂಬದು ಕೊನೆಯ ಹಂತ. ಪಾಟೀಲ್ ಕೊನೆಯ ಹಂತಕ್ಕೆ ಬಂದಿದ್ದಾರೆ ಎಂದರು.
ಇದನ್ನ ಸದನದಲ್ಲಿ ಚರ್ಚೆ ಮಾಡುತ್ತೇವೆ. ಜೆಡಿಎಸ್, ಬಿಜೆಪಿ ಸೇರಿ ಇನ್ನೆರಡು ದಿನದಲ್ಲಿ ಕೂತು ಸಭೆ ಮಾಡುತ್ತೇವೆ. ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಎಚ್ಚರಿಸಿದರು.ಅಂಬಿಕಾಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಒತ್ತಡ ಇತ್ತು ಅಂತ ಪತ್ರಿಕೆಯಲ್ಲಿ ಬಂದಿದೆ. ಯಾರ ಒತ್ತಡ ಇತ್ತು ಅಂತ ಸರ್ಕಾರ ತಿಳಿಸಬೇಕು. ಅಕಾರಿಗಳ, ಪಕ್ಷದವರಾ ಎಂಬುದನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಗರಕ್ಕೆ ಆಗಮಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಪರಮೇಶ್ವರ್ ಈಗಾಗಲೇ ನಾನು ಕಾಟಾಚಾರಕ್ಕೆ ಇದ್ದೇನೆ. ನನ್ನ ಯಾರೂ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಸುರ್ಜೇವಾಲ ಬಂದಿದ್ದಾರೆ, ಎಟಿಎಂ ಮಾಡಿಕೊಂಡಿದ್ದಾರೆ. ಅವರ ಕಾರ್ಯಕರ್ತರಿಗೆ ಕೊಡಲಿ ನಮಗೇನು ಬೇಸರ ಇಲ್ಲ. ಸುರ್ಜೇವಾಲ ಇಲ್ಲಿಗೆ ಯಾಕೆ ಬಂದಿದ್ದಾರೆ ಎಂಬುದೇ ಪ್ರಶ್ನೆ ಎಂದು ಹೇಳಿದ್ದಾರೆ.
ಜನರ ಕಷ್ಟ ಕೇಳಲು ಕಾಂಗ್ರೆಸ್‍ನ ಯಾರೂ ಕೂಡ ಸಿದ್ದರಿಲ್ಲ. ಜನರ ಸಂಕಷ್ಟ ಕೇಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.