ಬೆಂಗಳೂರು,ಜ.12- ಆಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಬಿಜೆಪಿ, ಆರ್‍ಎಸ್‍ಎಸ್ ಕಾರ್ಯಕ್ರಮವಾಗಿದೆ, ಆದ್ದರಿಂದ ನಾವು ಹೋಗುವುದಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷ 1951ರಲ್ಲಿ ಸೋಮನಾಥ ದೇವಾಲಯಕ್ಕೆ ಏಕೆ ಹೋಗಲಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದೂ ದ್ವೇಷ ಕಾಂಗ್ರೆಸ್‍ನ ಕಣಕಣದಲ್ಲೂ ಇದೆ. 1951ರಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಉದ್ಘಾಟನೆ ಆದಾಗ ಅಂದಿನ ಪ್ರಧಾನಿ ನೆಹರೂ ಅವರು ಅದರಲ್ಲಿ ಭಾಗವಹಿಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕ್ರೀಡೆಗಳು ಜೀವನ ಪಾಠ ಕಲಿಸುತ್ತದೆ : ಎಸ್.ಮರಿಸ್ವಾಮಿ
ಅಷ್ಟೇ ಅಲ್ಲದೆ, ಸೋಮನಾಥ ದೇವಾಲಯದ ಜೀರ್ಣೋದ್ಧಾರವನ್ನೇ ವಿರೋಧಿಸಿದ್ದ ನೆಹರೂ ಅವರು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಸಹ ಹೋಗದಂತೆ ತಡೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
1951ರಲ್ಲಿ ಬಿಜೆಪಿ ಇನ್ನೂ ಸ್ಥಾಪನೆಯೇ ಆಗಿರಲಿಲ್ಲ. ಮೇಲಾಗಿ ಅಂದು ಕಾಂಗ್ರೆಸ್ ಸರ್ಕಾರವೇ ಇತ್ತು, ಸ್ವತಃ ನೆಹರೂ ಅವರೇ ಪ್ರಧಾನಿ ಆಗಿದ್ದರು. ಕಾಂಗ್ರೆಸ್ ಪಕ್ಷದ ಹಿಂದೂ ದ್ವೇಷ ಅದರ ಕಣ ಕಣದಲ್ಲೂ ಇದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.