ಬೆಳಗಾವಿ, ಡಿ.12- ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಸಮರ ಸಾರಲು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸಭೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು ಶಾಸಕರನ್ನು ಒಟ್ಟು ಸೇರಿಸಿ ಸಭೆ ಕರೆದಿದ್ದಾರೆ.ಬುಧವಾರ ಬೆಳಗಾವಿಯಲ್ಲಿ ಸಭೆ ನಡೆಯಲಿದೆ. ರಾತ್ರಿಯ ಭೋಜನಕ್ಕೆ ಜತೆ ಸೇರಿ ಅವರು ಚರ್ಚೆ ನಡೆಸಲಿದ್ದಾರೆ.
ಕಳೆದ ಗುರುವಾರ ಆಶೋಕ್ ಅವರ ಸದನ ಬಹಿಷ್ಕಾರ ನಿಲುವಿಗೆ ವಿಶ್ವನಾಥ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನೆ ಮಾಡಬೇಕು ಎಂದು ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದರು. ಈ ವೇಳೆ ಬಹಿಷ್ಕಾರ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು.ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಅಶೋಕ್ ಎಂದು ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅವರು ಏಕವಚನದಲ್ಲಿ ಅಶೋಕ್ ಅವರನ್ನು ನಿಂದಿಸಿದ್ದಾರೆ ಕೂಡ.
ಹಿಂದಿನ ಸಾಲಿನ ಶಾಸಕರಿಗೆ ಈ ಮಾಹಿತಿ ರವಾನೆ ಯಾಗಿರಲಿಲ್ಲ. ವಿರೋಧ ಪಕ್ಷದ ಮುಖ್ಯ ಸಚೇತಕರ ನೇಮಕವಾಗಿದ್ದರೆ ಈ ಸಮನ್ವಯದ ಕೊರತೆ ಸೃಷ್ಟಿಯಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಒಟ್ಟಾರೆ ಯಾಗಿ ಈ ಬೆಳವಣಿಗೆಯಿಂದ ಅಶೋಕ್ ಸ್ವಲ್ಪ ಕಳೆಗುಂದಿದಂತೆ ಕಂಡು ಬಂದಿದ್ದರೆ ಮಾಜಿ ಸಚಿವ ಬೈರತಿ ಬಸವರಾಜ್ ಹೊರತುಪಡಿಸಿ ಬೆಂಗಳೂರಿನ ಬಹುತೇಕ ಶಾಸಕರು ಶುಕ್ರವಾರ ಸದನಕ್ಕೆ ಗೈರು ಹಾಜರಾಗಿದ್ದರು. ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿಯ ಬೆಂಗಳೂರು ಶಾಸಕರು ಸಭೆ ನಡೆಸುವ ಸಾಧ್ಯತೆ ಇದೆ.