Friday, October 11, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanರೇಬಿಸ್‌‍ ದಿನಾಚರಣೆ : ವಿದ್ಯಾರ್ಥಿಗಳಿಗೆ-ರೈತ ಮಿತ್ರರಿಗೆ ಅರಿವು ಕಾರ್ಯಕ್ರಮ

ರೇಬಿಸ್‌‍ ದಿನಾಚರಣೆ : ವಿದ್ಯಾರ್ಥಿಗಳಿಗೆ-ರೈತ ಮಿತ್ರರಿಗೆ ಅರಿವು ಕಾರ್ಯಕ್ರಮ

Rabies Day: Awareness Program for Students-Farmer

ಅರಕಲಗೂಡು, ಸೆ.23– ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಸೆ.28 ರಂದು ವಿಶ್ವ ರೇಬಿಸ್‌‍ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ . ಇದರ ಪ್ರಯುಕ್ತ ಸೆ.27ರ ವರೆಗೆ ಶಾಲಾ ಮಕ್ಕಳಿಗೆ ಮತ್ತು ರೈತಮಿತ್ರರಿಗೆ ರೇಬಿಸ್‌‍ ಬಂದಂತಹ ನಾಯಿಗಳು ಕಚ್ಚಿದಾಗ ಅಥವಾ ಮಾಮೂಲಿ ನಾಯಿಗಳು ಕಚ್ಚಿದಾಗ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಅರಕಲಗೂಡು ತಾಲೂಕಿನ ಪಶುವೈದ್ಯಾಧಿಕಾರಿಗಳು ಅವರ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಹೋಗಿ ಎಲ್ಲಾ ಶಾಲಾ ಮಕ್ಕಳಿಗೆ ರೇಬಿಸ್‌‍ ಪ್ರಾಣಿಗಳು ಕಚ್ಚಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅನುಸರಿಸಬೇಕಾದಂತ ಎಲ್ಲಾ ಕ್ರಮಗಳನ್ನು ವಿವರಿಸುತ್ತಿದ್ದಾರೆ.

ಯಾವುದೇ ನಾಯಿಗಳು, ಬೆಕ್ಕುಗಳು, ಬ್ಯಾಟ್‌ಗಳು, ಹುಚ್ಚು ಹಿಡಿದ ಹಸುಗಳು ಅಥವಾ ಯಾವುದೇ ಪ್ರಾಣಿಗಳು ಕಚ್ಚಿದಾಗ ತಕ್ಷಣ 15 ನಿಮಿಷದೊಳಗೆ ಕಾರ್ಬೋಲಿಕ್‌ ಸೋಪು, ಡೆಟಾಲ್‌ ಸೋಪು ಅಥವಾ ಬಟ್ಟೆ ಸೋಪುಗಳಿಂದ ಚೆನ್ನಾಗಿ ತೊಳೆಯಬೇಕು, ನಂತರ ನಲ್ಲಿ ನೀರನ್ನು ಬಿಟ್ಟು ಕನಿಷ್ಠ 2ರಿಂದ 3 ನಿಮಿಷ ತೊಳೆದರೆ ಆ ವೈರಸ್‌‍ ಪ್ರಮಾಣ ಶೇಕಡ 90ರಷ್ಟು ಕಡಿಮೆ ಆಗುತ್ತದೆ.

ನಾಯಿ ಕಚ್ಚಿದ ತಕ್ಷಣ ಯಾವುದೇ ಕಾರಣಕ್ಕೂ ಮೆಣಸಿನ ಪುಡಿ, ಮೆಣಸಿನಕಾಯಿಯ ಪುಡಿ, ಅರಿಶಿಣ ಪುಡಿ, ಕಾಫಿ ಪೌಡರ್‌ ಹೀಗೆ ಇತ್ಯಾದಿ ಯಾವುದೇ ನಾಟಿ ಔಷಧಿಗಳನ್ನ ಹಚ್ಚಬಾರದು ನಂತರ ವೈದ್ಯರ ಸಲಹೆ ಪಡೆದು ಅದನ್ನ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳಬೇಕು.

ಇದೇ ತಿಂಗಳು ಸೆ.28 ರಂದು ವಿಶ್ವ ರೇಬಿಸ್‌‍ ದಿನಾಚರಣೆಯನ್ನು ಆಚರಿಸುವಾಗ ನೀವು ಸಾಕಿರುವ ಹಾಗೂ ನೀವು ತಂದಂತಹ ಎಲ್ಲಾ ಸಾಕು ಪ್ರಾಣಿಗಳಿಗೆ ಉಚಿತವಾಗಿ ಪಶು ಆಸ್ಪತ್ರೆಯಲ್ಲಿ ಪಾಲಿ ಕ್ಲಿನಿಕ್‌ನಲ್ಲಿ ರೇಬಿಸ್‌‍ ಲಸಿಕೆಯನ್ನು ಹಾಕಿ ಕೊಡುತ್ತೇವೆ ಸಾರ್ವಜನಿಕರು ತಪ್ಪದೇ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪಶು ಆಸ್ಪತ್ರೆಯ ಸಹಾಯಕ ನಿರ್ಧೆಶಕರಾದ ಡಾ. ಶಿವರಾಮ್‌ ತಿಳಿಸಿದ್ದಾರೆ.

ಸರ್ಕಾರವು ನಮ ಭಾರತವನ್ನು 2030ರೊಳಗೆ ರೇಬಿಸ್‌‍ ಮುಕ್ತ ದೇಶವನ್ನಾಗಿ ಮಾಡುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮಿಕೊಂಡಿದೆ.

ಹೆಣ್ಣು ಕರು ಗ್ಯಾರಂಟಿ ಯೋಜನೆ:
ಹೈನುಗಾರರ ಮೇಲಿದ್ದ ಗಂಡು ಹೋರಿ ಕರು ಸಾಕುವ ಬಾರ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿರುವ ಹೆಣ್ಣುಕರು ಗ್ಯಾರಂಟಿ ಯೋಜನೆ ನೀಡುವ ಲಿಂಗ ನಿರ್ಧಾರಿತ ವೀರ್ಯಬಳಕೆ ಯೋಜನೆ ರಾಜ್ಯದಲ್ಲಿ ಶೇ 90 ಕ್ಕಿಂತಲೂ ಹೆಚ್ಚು ಯಶಸ್ವಿಯಾಗಿದೆ.

ಸಾಂಪ್ರದಾಯಿಕ ವೀರ್ಯನಳಿಕೆ ಬಳಸಿ ಕೃತಕದಾರಣೆ ಮಾಡುವುದರಿಂದ ಹೆಣ್ಣುಕರು ಹುಟ್ಟುವ ಸಾಧ್ಯತೆ ಶೇ 50 ರಷ್ಟು ಇದೆ .ಆದರೆ ಉಳಿದ ಶೇ 50 ಪರ್ಸೆಂಟ್‌ ಗಂಡು ಕರು ಜನಿಸಲೇಬೇಕು, ಅದನ್ನು ಸಾಕುವುದು ರೈತರಿಗೆ ಅಂದ್ರೆ ಹೈನುಗಾರಿಕೆಗೆ ಹೊರೆಯಾಗುತ್ತಿದೆ. ಆದ ಕಾರಣ ರೈತರು ಆ ಗಂಡು ಕರುಗಳನ್ನು ಖಸಾಯಿಖಾನೆಗೆ ನೀಡುತ್ತಿದ್ದಾರೆ, ರಸ್ತೆಗಳಲ್ಲಿ ಅಥವಾ ಜಾತ್ರೆಗಳಲ್ಲಿ ದೇವಸ್ಥಾನಗಳಲ್ಲಿ ಸಂತೆಗಳಲ್ಲಿ ಬಿಡುವುದು ವಾಡಿಕೆಯಾಗಿದೆ.

ಗಂಡುಕರುಗಳಿಂದ ಅನವಶ್ಯಕವಾಗಿ ಈ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು, ಅವರ ಮೇಲಿನ ಹೊರೆಯನ್ನು ತೆಗೆಯಲು ಕೇಂದ್ರ ಸರ್ಕಾರ ವೇಗ ವರ್ದಿತ ತಳಿ ಸುಧಾರಣೆ ಕಾರ್ಯಕ್ರಮದಡಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹೆಣ್ಣು ಕರು ಕಾತ್ರಿ ನೀಡುವ ಯೋಜನೆಯ ಆರಂಭಿಸಿದೆ.

ಸಾಂಪ್ರದಾಯಕ ಪದ್ಧತಿಗೆ ಹೋಲಿಸಿದರೆ ಈಗ ಬಂದಿರುವ ಫಲಿತಾಂಶ ನಿಜವಾಗಿಯೂ ರೈತರಿಗೆ ಆಶಾದಾಯಕವಾಗಿದೆ. ಲಿಂಗ ನಿರ್ಧಾರಿತ ವೀರ್ಯ ಬಳಕೆಯಿಂದ ಶೇಕಡ 95 ರಷ್ಟು ಹೆಣ್ಣು ಕುರುವೇ ಹುಟ್ಟುತ್ತದೆ, ಎಂದು ತಜ್ಞರು ಭರವಸೆ ನೀಡಿದ್ದಾರೆ, ಭರವಸೆ ನೀಡಿದಷ್ಟು ಪ್ರಮಾಣ ತಲುಪದಿದ್ದರೂ, ಪ್ರಥಮ ಯತ್ನದಲ್ಲೇ ನಿರೀಕ್ಷೆಯೇ ಸಮೀಪ ಬಂದಿರುವುದು ಪಶುಸಂಗೋಪನ ಇಲಾಖೆಯ ಅಧಿಕಾರಿಗಳಲ್ಲಿ ಹೆಚ್ಚು ಉತ್ಸಾಹ ಹೆಚ್ಚಿರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗರ್ಭದರಿಸುವ ಪ್ರಮಾಣ ಶೇಕಡ 90ರಷ್ಟು ತಲುಪಿದೆ.

ಈ ಫಲಿತಾಂಶದಿಂದ ಉತ್ತೇಜನ ಪಡೆದ ರಾಜ್ಯ ಸರ್ಕಾರದ ಅಧಿಕಾರಿಗಳು ವೀರ್ಯ ನಳಿಕೆ ನೀಡಲು ನಿರ್ಧರಿಸಿದ ಈ ಪ್ರಾಯೋಗಿಕ ಹಂತದಲ್ಲಿ ಪ್ರಥಮವಾಗಿ ಒಂದು ಲಿಂಗ ನಿರ್ಧಾರಿತ ವೀರ್ಯನಳಿಕೆಯನ್ನು ಪ್ರಥಮವಾಗಿ ನೀಡಲಾಗುತ್ತದೆ. ಪ್ರಥಮ ಹಂತದಲ್ಲೇ ಕೆಲವು ಹಸುಗಳು ಗರ್ಭ ಧರಿಸಿದರೆ ಕೆಲವು ಹಸುಗಳು ಎರಡನೇ ಡೋಸ್‌‍ ನೀಡಿದಾಗ ಗರ್ಭ ಧರಿಸುತ್ತವೆ.

ಎರಡನೇ ಡೋಸ್‌‍ ನೀಡಿದಾಗಲೂ ಸಹ ಹಸು ಗರ್ಭ ಧರಿಸದಿದ್ದರೆ ರೈತರು ಸರ್ಕಾರಕ್ಕೆ ಪಾವತಿಸಿದ್ದ ಪ್ರತಿ ಡೋಸ್‌‍ಗೆ ನೀಡಿದ್ದ ರೂ.250/- ಗಳನ್ನು ವಾಪಸ್‌‍ ನೀಡಲಾಗುತ್ತದೆ. ರೈತರು ಈ ಪ್ರಯೊಜನ ಪಡೆದ ನಂತರ ಸರ್ಕಾರಕ್ಕೆ ಅಥವಾ ಪಶು ವೈದ್ಯರಿಗೆ ಮಾಹಿತಿಯನ್ನು ನೀಡಬೇಕು.

ಕರುಗಳು ಜನಿಸಿದ ನಂತರವೂ ಹೆಣ್ಣು ಕರು ಅಥವಾ ಗಂಡುಕರು ಹುಟ್ಟಿದಾಗ ಮಾಹಿತಿಯನ್ನು ನೀಡಿದರೆ ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಲು ಅನುಕೂಲವಾಗುತ್ತದೆ.
ಪ್ರಾರಂಭಿಕ ಹಂತದಲ್ಲಿ ಅರಕಲಗೂಡು ತಾಲ್ಲೂಕಿಗೆ320 ಲಿಂಗ ನಿರ್ಧಾರತ ವೀರ್ಯ ಉಳಿಕೆಗಳನ್ನು ನೀಡಿದ್ದು, ಈಗಾಗಲೇ ನಮ್ಮ ಸಿಬ್ಬಂದಿಗಳು 200 ನಳಿಕೆಯನ್ನು ಪ್ರಯೋಗ ಮಾಡಿದ್ದು, ರೈತರಿಂದ ಉತ್ತಮ ನೀರಿಕ್ಷೆಯ ಭರವಸೆಯಲ್ಲಿದ್ದೇವೆ ಎಂದು ಡಾ. ಶಿವರಾಮ್‌ ಅವರು ತಿಳಿಸಿದ್ದಾರೆ.

RELATED ARTICLES

Latest News