ಪರ್ತ್, ನ.20- ತವರಿನ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 0-3 ರಿಂದ ಕ್ಲೀನ್ಸ್ವೀಪ್ ಸಾಧಿಸಿದ ಬೆನ್ನಲ್ಲೇ ಹಲವು ಕ್ರಿಕೆಟಿಗರು ಚೇತೇಶ್ವರ್ ಪೂಜಾರ ಹಾಗೂ ರಾಹುಲ್ದ್ರಾವಿಡ್ ಅವರು ತಂಡದಲ್ಲಿರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಬೆನ್ನಲ್ಲೇ ವಿಶ್ವಕಪ್ ವಿಜೇತ ಕೋಚ್ ರಾಹುಲ್ದ್ರಾವಿಡ್ ಯುವ ಆಟಗಾರ ಶುಭಮನ್ ಗಿಲ್ ಬ್ಯಾಟಿಂಗ್ ಕ್ರಮಾಂಕವನ್ನು ಶ್ಲಾಘಿಸಿದ್ದಾರೆ.
ಶುಭಮನ್ಗಿಲ್ ಅವರು ವಿಭಿನ್ನ ಆಟಗಾರರಾಗಿದ್ದು, ಕಳೆದ ಬಾರಿ ಆತ ಆಸ್ಟ್ರೇಲಿಯಾ ನೆಲದಲ್ಲಿ ತಮ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದು, 2021ರ ಸರಣಿಯಲ್ಲಿ ಬ್ರೆಸ್ಬೇನ್ ಟೆಸ್ಟ್ನಲ್ಲಿ ಎಲ್ಲರೂ ಪಂತ್ರ ಆಟ (89*ರನ್) ವನ್ನು ಶ್ಲಾಘಿಸಿದರು.
ಆದರೆ ಪಂದ್ಯದ ಐದನೇ ದಿನ ಗಿಲ್ 91 ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದರು. ಆದ್ದರಿಂದ ಪೂಜಾರ ಹಾಗೂ ನನಗಿ ಂತ ಗಿಲ್ ವಿಭಿನ್ನ ಆಟಗಾರರಾಗಿದ್ದಾರೆ’ ಎಂದು ರಾಹುಲ್ದ್ರಾವಿಡ್ ಹೇಳಿದ್ದಾರೆ.