Tuesday, February 11, 2025
Homeಕ್ರೀಡಾ ಸುದ್ದಿ | Sports"ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ, ಕೆಲಸ ಇದ್ದರೆ ಹೇಳಿ" : ದ್ರಾವಿಡ್‌

“ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ, ಕೆಲಸ ಇದ್ದರೆ ಹೇಳಿ” : ದ್ರಾವಿಡ್‌

ನವದೆಹಲಿ,ಜು.2- ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಏನಾದರು ಕೆಲಸ ಇದ್ದರೆ ಹೇಳಿ ಎಂದು ಭಾರತ ಕ್ರಿಕೆಟ್‌ ತಂಡದ ತರಬೇತುದಾರ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಇತ್ತ ಟಿ-20 ವಿಶ್ವಕಪ್‌ ಗೆಲುವಿನ ಬಳಿಕ ಕೋಚ್‌ ಹ್ದುೆಯಿಂದ ಕೆಳಗಿಳಿದಿರುವ ರಾಹುಲ್‌ ದ್ರಾವಿಡ್‌ ಅವರಿಗೆ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್‌, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿ ಎಂದಿದ್ದಾರೆ.

ಗೆಲುವಿನ ಮೂಲಕ ಟೀಮ್‌ ಇಂಡಿಯಾ ಆಟಗಾರರು ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಅಭೂತಪೂರ್ವ ಬೀಳ್ಕೊಡುಗೆ ನೀಡಿದ್ದಾರೆ. ಇದರೊಂದಿಗೆ ದ್ರಾವಿಡ್‌ ಅವರ ಕೋಚಿಂಗ್‌ ಕೆರಿಯರ್‌ ಕೂಡ ಅಂತ್ಯವಾಗಿದೆ.

ಟಿ-20 ವಿಶ್ವಕಪ್‌ ಮುಕ್ತಾಯದ ಬೆನ್ನಲ್ಲೇ ಟೀಮ್‌ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕಾರ್ಯಾವಧಿ ಮುಗಿದಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ದ್ರಾವಿಡ್‌ ಕೋಚ್‌ ಆಗಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಝಿಂಬಾಬ್ವೆ ವಿರುದ್ಧದ ಟಿ-20 ಸರಣಿಗೆ ವಿವಿಎಸ್‌‍ ಲಕ್ಷ್ಮಣ್‌ ಅವರನ್ನು ತಾತ್ಕಾಲಿಕ ಕೋಚ್‌ ಆಗಿ ನೇಮಿಸಲಾಗಿದೆ.

ಹಾಗೆಯೇ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ನೂತನ ಕೋಚ್‌ ಅನ್ನು ಘೋಷಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.ಅತ್ತ ಟೀಮ್‌ ಇಂಡಿಯಾ ಕೋಚ್‌ ರೇಸನಲ್ಲಿ ಗೌತಮ್‌ ಗಂಭೀರ್‌ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಭಾರತ ತಂಡದ ತರಬೇತುದಾರನಾಗಿ ಗೌತಿ ಹೊಸ ಇನಿಂಗ್‌್ಸ ಆರಂಭಿಸಿದರೂ ಅಚ್ಚರಿಪಡಬೇಕಿಲ್ಲ.

RELATED ARTICLES

Latest News