ಬೆಂಗಳೂರು,ಜೂ.4- ಕಾಂಗ್ರೆಸ್‌ನ ಯುವ ನಾಯಕ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವೈನಾಡು ಹಾಗೂ ಉತ್ತರಪ್ರದೇಶದ ರಾಯಬರೇಲಿ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಕೇರಳದ ವಯನಾಡು ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಅನ್ನಿರಾಜಾ ವಿರುದ್ಧ 2.13 ಲಕ್ಷ ಮತಗಳ ಅಂತರದ ಭರ್ಜರಿ ಮುನ್ನಡೆ ಸಾಧಿಸಿದರು. 7 ಹಂತಗಳ ಮತ ಎಣಿಕೆ ಸಂದರ್ಭದಲ್ಲೂ ಕೂಡ ನಿರಂತರ ಮುನ್ನಡೆ ರಾಹುಲ್ ಗಾಂಧಿ ಕಾಯ್ದುಕೊಂಡು ಜಯಗಳಿಸುವತ್ತ ದಾಪುಗಾಲಿಟ್ಟಿದ್ದರು.
ಅದೇ ರೀತಿ ಉತ್ತರ ಪ್ರದೇಶದ ರಾಯ ಬರೇಲಿ ಕ್ಷೇತ್ರದಲ್ಲೂ ಕೂಡ ಸ್ಪರ್ಽಸಿದ್ದ ರಾಹುಲ್ ಗಾಂಧಿ ತಮ ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ 1.75 ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು.
ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಆರಂಭಿಕ ಹಂತದಿಂದಲೂ ಭಾರೀ ಮುನ್ನಡೆ ಸಾರ್ಧಿಸಿದ್ದು, ವಿಶೇಷ ಗಮನ ಸೆಳೆದಿತ್ತು. ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಅವರು ಕೇರಳದ ವೈನಾಡು ಕ್ಷೇತ್ರದಲ್ಲಿ ಕಳೆದ ಬಾರಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರ ಹಾಗೂ ವೈನಾಡು ಕ್ಷೇತ್ರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅಮೇಥಿಯಲ್ಲಿ ಸತಿ ಇರಾಣಿ ವಿರುದ್ಧ ಸೋಲನ್ನು ಅನುಭವಿಸಿದರು.
ಪ್ರಸ್ತುತ ವಯನಾಡು ಕ್ಷೇತ್ರದ ಜೊತೆ ತಮ ತಾಯಿ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.