Monday, January 13, 2025
Homeರಾಷ್ಟ್ರೀಯ | National"ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ" ಎಂದು ಶ್ರೀರಾಮ ನನ್ನ ಕನಸಲ್ಲಿ ಬಂದು ಹೇಳಿದ್ದಾನೆ

“ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಶ್ರೀರಾಮ ನನ್ನ ಕನಸಲ್ಲಿ ಬಂದು ಹೇಳಿದ್ದಾನೆ

ನವದೆಹಲಿ,ಜ.15- ಇದೇ ಜ. 22ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಗವಾನ್ ರಾಮನು ತನ್ನ ಕನಸಿನಲ್ಲಿ ಬಂದು ಹೇಳಿದ್ದ ಎಂದು ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

ಚುನಾವಣೆ ಮುಗಿದ ಮೇಲೆ ರಾಮನನ್ನು ಮರೆತುಬಿಡುತ್ತಾರೆ ಜನವರಿ 22ಕ್ಕೆ ಬರುವುದು ಕಡ್ಡಾಯವೇ? ನಾಲ್ವರು ಶಂಕರಾಚಾರ್ಯರ ಕನಸಿನಲ್ಲಿ ರಾಮ್ ಬಂದಿದ್ದಾನೆ. ರಾಮ್ ಜೀ ನನ್ನ ಕನಸಿನಲ್ಲಿಯೂ ಬಂದರು ಮತ್ತು ಇದು ಬೂಟಾಟಿಕೆ ಇದೆ ಹೀಗಾಗಿ ನಾನು ಬರುವುದಿಲ್ಲ ಎಂದು ತಿಳಿಸಿದರು ಎಂದಿದ್ದಾರೆ.

ತೇಜ್ ಪ್ರತಾಪ್ ಅವರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಮಠಾಧೀಶರಾದ ನಾಲ್ವರು ಶಂಕರಾಚಾರ್ಯರನ್ನು ಉಲ್ಲೇಖಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ. ಅವರ ಸಹೋದರ, ಈಗ ಆಡಳಿತಾರೂಢ ರಾಷ್ಟ್ರೀಯ ಜನತಾ ದಳವನ್ನು ಮುನ್ನಡೆಸುತ್ತಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರತಿಪಕ್ಷ ಬಿಜೆಪಿ ಕೂಡ ಈ ಹೇಳಿಕೆಗೆ ಏನನ್ನೂ ಹೇಳಿಲ್ಲ.

ಉಜ್ಜಯಿನಿ ಕುಂಭಮೇಳಕ್ಕೆ 12 ಕೋಟಿ ಜನ ಬರುವ ನಿರೀಕ್ಷೆ

ಮಾನವೀಯತೆಯನ್ನು ಅಗ್ರಗಣ್ಯ ಧರ್ಮವೆಂದು ಪರಿಗಣಿಸಬೇಕು ಎಂದಿದ್ದ ಬಿಹಾರ ಸಚಿವ ಚಂದ್ರಶೇಖರ್ ಅವರು ಜನರು ಅನಾರೋಗ್ಯಕ್ಕೆ ಒಳಗಾದರೆ ದೇವಸ್ಥಾನಕ್ಕೆ ಭೇಟಿ ನೀಡುವ ಬದಲು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ ಎಂದು ಹೇಳಿದ ನಂತರ ಅವರು ಈ ಸಲಹೆ ನೀಡಿದರು.

RELATED ARTICLES

Latest News