ಚೆನ್ನೈ, ಜ 22 (ಪಿಟಿಐ) ತಮಿಳುನಾಡಿನ ಖಾಸಗಿ ಅವರಣಗಳಲ್ಲಿ ನಡೆಸಲಾಗುವ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಸಂಬಂಧಿತ ಕಾರ್ಯಕ್ರಮಗಳಿಗೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿಯಾಗಿ ನಡೆಸುವ ಕಾರ್ಯಕ್ರಮಗಳು ದೇವರ ಮೇಲಿನ ಭಕ್ತಿ ಮಾತ್ರ ಎಂದು ಹೇಳಿರುವ ನ್ಯಾಯಾಲಯ ಶಾಂತಿ ಮತ್ತು ಸಂತೋಷ ಮತ್ತು ಸಾಮಾಜಿಕ ಸಮತೋಲನವನ್ನು ಯಾರು ಕದಡಬಾರದು ಎಂದು ಆದೇಶಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಭವ್ಯ ಮಂದಿರದ ಪ್ರಾಣ ಪ್ರತಿಷ್ಠಾಕ್ಕೆ ಗಂಟೆಗಳ ಮೊದಲು, ಮಹಾಮಸ್ತಕಾಭಿಷೇಕ ಸಮಾರಂಭದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲು ಸಂಘಟಕರಿಗೆ ಮುಕ್ತ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಕೋಮುಸೌಹಾರ್ಧತೆಗೆ ಸಾಕ್ಷಿಯಾಗಲಿದೆ ರಾಮಮಂದಿರ : ಅದಾನಿ
ನಗರದ ಪಟ್ಟಾಭಿರಾಮನ ಮದುವೆ ಮಂಟಪದಲ್ಲಿ ಸೋಮವಾರ ಭಜನೆ ಮತ್ತು ಅನ್ನದಾನ ನಡೆಸಲು ಆವಡಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪಟ್ಟಾಭಿರಾಮ ವಿಭಾಗದ ಪ್ರಭಾರಿ (ಪ್ರಥಮ ಪ್ರತಿವಾದಿ) ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಆನಂದ ವೆಂಕಟೇಶ್ ಈ ಆದೇಶ ನೀಡಿದ್ದಾರೆ. ಎಲ್ ಗಣಪತಿ ಎಂಬುವರು ಅರ್ಜಿ ಸಲ್ಲಿಸಿದ್ದರು.
ತಮಿಳುನಾಡನ್ನು ಪ್ರತಿನಿಧಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ ದಾಮೋಧರನ್ ಅವರು, ಖಾಸಗಿ ಆವರಣಗಳಾದ ಮಂಟಪಗಳು, ಖಾಸಗಿ ದೇವಸ್ಥಾನಗಳು ಮತ್ತು ಇತರ ಯಾವುದೇ ಖಾಸಗಿ ಸ್ಥಳದಲ್ಲಿ ನಡೆಸುವ ಕಾರ್ಯಕ್ರಮಗಳು, ಭಜನೆಗಳು ಮತ್ತು ಅನ್ನದಾನಗಳಿಗೆ ಪೊಲೀಸರಿಂದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದಿದ್ದಾರೆ.