ಅಯೋಧ್ಯೆ,ಜ.5- ಇದೇ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಈ ಮಹತ್ವದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವ್ರತ ಕೈಗೊಂಡಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂದು ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ಉದ್ಘಾಟನೆಯ ದಿನ ಪ್ರಧಾನಿ ಮೋದಿ ಅವರು ಉಪವಾಸ ಕೈಗೊಳ್ಳಲಿದ್ದು, ಅದೊಂದು ದಿನ ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮೋದಿಯವರು ಅಪ್ಪಟ ದೈವ ಭಕ್ತರು. ಅವರು ಉಪವಾಸ ಮಾಡುವುದು ಇದೇ ಮೊದಲೇನಲ್ಲ. ಪ್ರತಿ ವರ್ಷ ನವರಾತ್ರಿಯಂದು ಮೋದಿ ತಪ್ಪದೇ ಉಪವಾಸ ಮಾಡುತ್ತಾರೆ. ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ 9 ದಿನಗಳ ಉಪವಾಸ ಮಾಡುತ್ತಿದ್ದರು.
ಒಂಬತ್ತು ದಿನಗಳ ಉಪವಾಸದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಸಂಜೆ ವೇಳೆ ಒಂದು ಹಣ್ಣನ್ನು ನಿಂಬೆ ರಸದೊಂದಿಗೆ ಸೇವಿಸುತ್ತಿದ್ದರು. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸೇವನೆಯನ್ನು ಕೈಬಿಟ್ಟಿದ್ದರು. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ವಿವಿಧಾನಗಳು ಜನವರಿ 16ರಿಂದ ಪ್ರಾರಂಭವಾಗಿದೆ. ಜನವರಿ 22ರಂದು ದೇವಾಲಯದ ಉದ್ಘಾಟನೆಯು ಪ್ರಧಾನಿ ಮೋದಿ ಮೊದಲು ಪ್ರತಿಜ್ಞೆ ಸ್ವೀಕರಿಸಿ ದೇಶಕ್ಕೆ ಸಮರ್ಪಿಸುವುದರೊಂದಿಗೆ ಪ್ರಾರಂಭವಾಗಲಿದೆ. ನಂತರ ಅವರು ರಾಮಲಲ್ಲಾರ ಷೋಡಶೋಪಚಾರ ಪೂಜೆ ಮಾಡುತ್ತಾರೆ.
15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ
ರಾಮಮಂದಿರ ಉದ್ಘಾಟನೆಗೂ ಮೊದಲು ಅಂದರೆ ಜ.16ರಂದು ಮೋದಿಯವರ ಸಂಕಲ್ಪ ಅಕ್ಷಿತ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ. ಅಕ್ಷತೆ ಬಂದ 7 ದಿನಗಳ ಬಳಿಕ ಆಚರಣೆ ಪ್ರಾರಂಭವಾಗುತ್ತದೆ. ಇದೇ ವೇಳೆ ನಾಲ್ಕು ವೇದಗಳ ಎಲ್ಲ ಶಾಖೆಗಳ ಭಕ್ತಿ, ಯಾಗ ನಡೆಯುತ್ತದೆ.
ರಾಮಮಂದಿರ ಉದ್ಘಾಟನೆಯ ಮುನ್ನಾ ದಿನ ಜ.21ರಂದು ಮೋದಿ ಅಯೋಧ್ಯೆಗೆ ತೆರಳಲಿದ್ದಾರೆ. ಮರುದಿನ ಜ.22ರಂದು ಬೆಳಗ್ಗೆ ಸರಯು ನದಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಸಂಪ್ರದಾಯದ ಪ್ರಕಾರ ಪ್ರಾಣ ಪ್ರತಿಷ್ಠೆಯ ದಿನದಂದು ಮೋದಿ ಉಪವಾಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಗವಾನ್ ಹನುಮಂತನು ಅಯೋಧ್ಯೆಯ ರಾಜನಾಗಿ ಕುಳಿತಿದ್ದಾನೆ ಎಂಬ ನಂಬಿಕೆ ಇದೆ. ಹನುಮನ ಅನುಮತಿಯಿಲ್ಲದೆ ಇಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ನಂಬಿಕೆಯಿಂದಾಗಿ ಪ್ರಧಾನಿಯವರು ಮೊದಲು ಹನುಮಾನ್‍ಗರ್ಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅನುಮತಿ ಪಡೆದು ನಂತರ ರಾಮ ಜನ್ಮಭೂಮಿಗೆ ತೆರಳಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸುತ್ತಾರೆ ಎನ್ನಲಾಗಿದೆ.
ವಾಲ್ಮೀಕಿ ರಾಮಾಯಣದಲ್ಲಿಯೂ ಸಹ ಶ್ರೀರಾಮನು ಸಾಕೇತ್ ಧಾಮಕ್ಕೆ ಹೋಗುವ ಮೊದಲು ಹನುಮಂತನಿಗೆ ಪಟ್ಟಾಭಿಷೇಕ ಮಾಡಿದನೆಂದು ಉಲ್ಲೇಖಿಸಲಾಗಿದೆ.