Monday, May 6, 2024
Homeರಾಷ್ಟ್ರೀಯದೇಶದ ನಾನಾ ಮೂಲೆಗಳಿಂದ ಆಯೋಧ್ಯೆಯತ್ತ ದೌಡಾಯಿಸುತ್ತಿದೆ ಜನ ಸಮೂಹ

ದೇಶದ ನಾನಾ ಮೂಲೆಗಳಿಂದ ಆಯೋಧ್ಯೆಯತ್ತ ದೌಡಾಯಿಸುತ್ತಿದೆ ಜನ ಸಮೂಹ

ಅಯೋಧ್ಯೆ, ಜ. 19 (ಪಿಟಿಐ)ಮೈ ಕೊರೆಯುವ ಚಳಿಯ ನಡುವೆಯೂ ದೂರದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ದೇಶದಾದ್ಯಂತ ಜನ ವಾಕಿಂಗ್, ಸೈಕ್ಲಿಂಗ್ ಮತ್ತು ಸ್ಕೇಟಿಂಗ್ ಮೂಲಕ ರಾಮನಗರಿಗೆ ದೌಡಾಯಿಸುತ್ತಿದ್ದಾರೆ. ಭಗವಾನ್ ರಾಮನ ಭಕ್ತಿಯ ಪರಕಾಷ್ಟೆಯಲ್ಲಿ ಮಿಂದೆದ್ದಿರುವ ಜನ ಸಮೂಹ ಜ.22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉತ್ಸಾಹದಿಂದ ಅಯೋಧ್ಯೆಯತ್ತ ಸಾಗುತ್ತಿದ್ದಾರೆ.

ಬಿಹಾರದ ಮಾಧೇಪುರ ಜಿಲ್ಲೆಯ ನಿವಾಸಿಯಾಗಿರುವ ನಿತೀಶ್ ಕುಮಾರ್ ಅವರು ಅಯೋಧ್ಯೆ ತಲುಪಲು 600 ಕಿಲೋಮೀಟರ್‍ದೂರದ ಅಯೋಧ್ಯೆಗೆ ಸೈಕಲ್‍ನಲ್ಲಿ ಪ್ರಯಾಣಿಸಿದ್ದಾರೆ. ಬಿಹಾರದಿಂದ ಅಯೋಧ್ಯೆಗೆ 615 ಕಿಲೋಮೀಟರ್‍ಗಳನ್ನು ಕ್ರಮಿಸಲು ನನಗೆ ಏಳು ದಿನಗಳು ಬೇಕಾಯಿತು. ನಾನು ಇಂದು ತಲುಪಿದ್ದೇನೆ. ನಾನು ನನ್ನ ಸೈಕಲ್‍ನಲ್ಲಿ ಸ್ಲೀಪಿಂಗ್ ಬ್ಯಾಗ್ ಮತ್ತು ಕೆಲವು ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಮುಂದಿನ ಬಾರಿ ನನ್ನ ಕುಟುಂಬದೊಂದಿಗೆ ಬರುತ್ತೇನೆ. ನಾವು ಭಗವಾನ್ ರಾಮನಲ್ಲಿ ಬಲವಾದ ನಂಬಿಕೆ ಹೊಂದಿರುವುದರಿಂದ ಅಯೋಧ್ಯೆಯಲ್ಲಿ ಈ ಐತಿಹಾಸಿಕ ದಿನದ ಭಾಗವಾಗಲು ಬಯಸುತ್ತೇನೆ ಎಂದು ಅವರು ಹೇಳಿದರು. ಕುಮಾರ್ ಅವರು ತಮ್ಮ ಬೈಸಿಕಲ್ ಅನ್ನು ನಾಲ್ಕು ಧ್ವಜಗಳಿಂದ ಅಲಂಕರಿಸಿದ್ದಾರೆ ಹಾಗೂ ಜೈ ಶ್ರೀರಾಮ್ ಘೋಷಣೆ ಬರೆಸಿಕೊಂಡಿದ್ದಾರೆ.

ಧೀಘ ಡ್ಯಾನ್ಸ್ ಮ್ಯಾರಥಾನ್ (124 ಗಂಟೆಗಳ) ಗಿನ್ನೆಸ್ ಪುಸ್ತಕದ ದಾಖಲೆಯನ್ನು ಹೊಂದಿರುವ ಸೋನಿ ಚೌರಾಸಿಯಾ ಅವರು ಪವಿತ್ರ ಸಮಾರಂಭದ ಆಹ್ವಾನಿತರಲ್ಲಿ ಸೇರಿದ್ದಾರೆ ಮತ್ತು ವಾರಣಾಸಿಯಿಂದ ಅಯೋಧ್ಯೆಗೆ ಸ್ಕೇಟಿಂಗ್ ಮಾಡುತ್ತಿದ್ದಾರೆ. ನಾನು ಜನವರಿ 17 ರಂದು ವಾರಣಾಸಿಯಿಂದ ಹೊರಟೆ ಮತ್ತು ಜನವರಿ 22 ರಂದು ತಲುಪುತ್ತೇನೆ. ನಾನು ತುಂಬಾ ಹಿಂದೆಯೇ ಸ್ಕೇಟ್ ಮಾಡಿದ್ದೇನೆ ಆದರೆ ಈಗ ಹವಾಮಾನವು ಒಂದು ಸವಾಲಾಗಿದೆ. ಸಂಪೂರ್ಣ ಪ್ರಯಾಣವು 228 ಕಿಲೋಮೀಟರ್ ಆಗಿದೆ. ನನ್ನ ತರಬೇತುದಾರ ಮತ್ತು ವೈದ್ಯರು ನನ್ನನ್ನು ಅನುಸರಿಸುತ್ತಾರೆ ಎಂದು ಚೌರಾಸಿಯಾ ಪಿಟಿಐಗೆ ತಿಳಿಸಿದರು.

ಕೇವಲ 10 ವರ್ಷ ವಯಸ್ಸಿನ ಹಿಮಾಂಶು ಸೋನಿ ಜನವರಿ 16 ರಂದು ರಾಜಸ್ಥಾನದ ಕೋಟ್‍ಪುತ್ಲಿಯಿಂದ ಸ್ಕೇಟ್‍ನಲ್ಲಿ ಅಯೋಧ್ಯೆಗೆ ಹೊರಟಿದ್ದು 704 ಕಿಲೋಮೀಟರ್ ದೂರವನ್ನು ಕ್ರಮಿಸುವ ಗುರಿಯನ್ನು ಹೊಂದಿದ್ದಾರೆ.ನನ್ನ ಕುಟುಂಬವು ಭಗವಾನ್ ರಾಮನಲ್ಲಿ ನಂಬಿಕೆಯುಳ್ಳವರು ಮತ್ತು ನಾವು ಸುತ್ತಲೂ ನೋಡಿದಾಗ, ವಾತಾವರಣವು ದೀಪಾವಳಿಗಿಂತ ಕಡಿಮೆಯಿಲ್ಲ. ನಾನು ಪವಿತ್ರ ಸಮಾರಂಭದ ದಿನದಂದು ಅಯೋಧ್ಯೆಯಲ್ಲಿ ಇರಬೇಕೆಂದು ಬಯಸಿದ್ದೆ ಮತ್ತು ನನ್ನ ಪ್ರತಿಭೆಯನ್ನು ಮುಂದುವರಿಸುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದು ಎಂದು ಸೋನಿ ಹೇಳಿದರು.

10ಸಾವಿರ ಕೋಟಿ ಬಂಡವಾಳ ಹೂಡಿಕೆ ಒಡಂಬಡಿಕೆಗೆ ಮಹಾರಾಷ್ಟ ಸಹಿ

ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಶಬನಮ್ ಶೇಖ್ ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.ಒಟ್ಟು ಪ್ರಯಾಣವು 1,400 ಕಿಲೋಮೀಟರ್‍ಗಳಿಗಿಂತ ಹೆಚ್ಚಿದೆ. ನಾನು ದಿನಕ್ಕೆ 60 ಕಿಲೋಮೀಟರ್‍ಗಳಷ್ಟು ನಡೆಯುತ್ತೇನೆ ಮತ್ತು ಅನೇಕ ವಿರಾಮಗಳನ್ನು ತೆಗೆದುಕೊಳ್ಳುತ್ತೇನೆ. ಹುಡುಗಿಯಾಗಿ, ಪ್ರಯಾಣದ ಸಮಯದಲ್ಲಿ ವಿರಾಮಗಳನ್ನು ತೆಗೆದುಕೊಳ್ಳಲು ಸುರಕ್ಷಿತ ಸ್ಥಳವನ್ನು ಹುಡುಕುವುದು ಸ್ಪಷ್ಟ ಕಾಳಜಿಯಾಗಿದೆ ಆದರೆ ನಾನು ಎಲ್ಲಿಗೆ ಹೋದರೂ ಜನರು ಸ್ವಾಗತಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದುಂಡಗಿನ ಕನ್ನಡಕ ಮತ್ತು ಕೈಯಲ್ಲಿ ಕೋಲು ಹಿಡಿದು ಮಹಾತ್ಮ ಗಾಂೀಧಿಜಿ ವೇಷ ಧರಿಸಿ, ಕರ್ನಾಟಕದ ಕರಕಿಟ್ಟಿ ನಿವಾಸಿ ಮುತ್ತಣ್ಣ ತಿರ್ಲಾಪುರ ಅವರು 2000 ಕಿಲೋಮೀಟರ್‍ಗೂ ಹೆಚ್ಚು ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆ ತಲುಪಿದ್ದಾರೆ.

RELATED ARTICLES

Latest News