Monday, November 25, 2024
Homeರಾಜಕೀಯ | Politicsಬಿಜೆಪಿಯದು ಸರ್ಕಾರ ಬೀಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ : ರಾಮಲಿಂಗಾರೆಡ್ಡಿ

ಬಿಜೆಪಿಯದು ಸರ್ಕಾರ ಬೀಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ : ರಾಮಲಿಂಗಾರೆಡ್ಡಿ

ಬೆಂಗಳೂರು, ಮೇ 13- ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಎರಡೂ ಸೇರಿದರೆ 84 ಶಾಸಕರಾಗುತ್ತಾರೆ. ನಾವು 137 ಶಾಸಕರನ್ನು ಹೊಂದಿದ್ದೇವೆ. ನಮ್ಮ ಸರ್ಕಾರ ಪತನವಾಗಬೇಕಾದರೆ 55 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಡಬೇಕು. ನಮ್ಮ ಸಂಖ್ಯಾಬಲ 83 ರಷ್ಟಾಗಬೇಕು. ಆಗ ಸರ್ಕಾರ ಪತನವಾಗಲು ಸಾಧ್ಯ. ಇಲ್ಲದೇ ಹೋದರೆ ಬಿಜೆಪಿಯವರು ಹೇಗೆ ಹೊಸ ಸರ್ಕಾರ ರಚನೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಜನರ ನಾಡಿಮಿಡಿತ ನೋಡಿದರೆ ಅವರು ಏಕ ಅಂಕಿಯನ್ನು ದಾಟುವುದೂ ಕಷ್ಟಸಾಧ್ಯವಾಗಿದೆ. ಕಾಂಗ್ರೆಸ್‌ನ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ಹತಾಶರಾಗಿರುವ ಬಿಜೆಪಿಯವರು ಇಂತಹ ಅಸಂಬದ್ಧವಾದ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆಗೆ 10ಕ್ಕೂ ಹೆಚ್ಚು ಬಿಜೆಪಿ ಸಂಸದರಿಗೆ ಗೋಬ್ಯಾಕ್‌ ಎಂಬ ಘೋಷಣೆ ಬಿಸಿ ತಟ್ಟಿತ್ತು. ಮೊದಲು ಅವರು ತಮ್ಮ ಮನೆಯನ್ನು ಸರಿಯಾಗಿ ನೋಡಿಕೊಳ್ಳಲಿ. ಅನಂತರ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು. ಬಿಜೆಪಿಯಲ್ಲೀಗ ಮತ ತಂದುಕೊಡುವಂತಹ ನಾಯಕತ್ವ ಯಾರದಿದೆ? ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಮತ ನೀಡಿ ಎಂದು ಕೇಳಿಕೊಂಡರು. ಅವರ ಯೋಗ್ಯತೆಗೆ ಬಿಜೆಪಿ ಹೆಸರಿನಲ್ಲಾಗಲೀ ಅಥವಾ ಅಭ್ಯರ್ಥಿಗಳ ಹೆಸರಿನಲ್ಲಾಗಲೀ ಮತ ಕೇಳಲಿಲ್ಲ ಎಂದು ಕಿಡಿಕಾರಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿ ಕಾರಕ್ಕೆ ಬಂದರೆ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ. ಮೊದಲು ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ಹೇಳಿದರು.

RELATED ARTICLES

Latest News